ಗೋವಾದ ಬಿಜೆಪಿ ಶಾಸಕಿ ಅಲಿನಾ ಸಲ್ಡಾನಾ ಆಪ್ ಸೇರಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ತಮ್ಮ ಶಾಸಕಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಲ್ಡಾನಾ, ಕೇಸರಿ ಪಾಳೆಯದ ’ಜನ-ವಿರೋಧಿ’ ನೀತಿ ತಮ್ಮ ಉಸಿರುಗಟ್ಟಿಸುತ್ತಿತ್ತು ಎಂದಿದ್ದಾರೆ.
ಗುರುವಾರ ತಮ್ಮ ಶಾಸಕಿ ಸ್ಥಾನಮಾನಕ್ಕೆ ರಾಜೀನಾಮೆ ಕೊಟ್ಟ ಸಲ್ಡಾನಾ, ಆಪ್ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಪಕ್ಷ ಸೇರಿಕೊಂಡಿದ್ದಾರೆ.
ಮಹಿಳೆ ಟೋಪಿಯನ್ನು ತಿಂದಂತೆ ನಟಿಸಿದ ಗಜರಾಜ: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 15 ಮಿಲಿಯನ್ ಮಂದಿ..!
“ನನಗೆ ಉಸಿರುಗಟ್ಟಿದಂತೆ ಭಾಸವಾಗುತ್ತಿತ್ತು. ಬಿಜೆಪಿಗೆ ಸಹ ತನ್ನ ಜನವಿರೋಧಿ ಗುರಿಗಳಿಗೆ ನಾನು ಅಡ್ಡಿಯಾದಂತೆ ಕಾಣುತ್ತಿದ್ದೆ. ನಾನು ಜನತೆಯೊಂದಿಗೆ ಇದ್ದರೆ, ಬಿಜೆಪಿ ಜೊತೆಗೆ ಇರಲು ಸಾಧ್ಯವಿಲ್ಲ. ನಾನು ದೆಹಲಿಯಲ್ಲಿದ್ದು, ಕೇಜ್ರಿವಾಲ್ ಸರ್ಕಾರ ಮಾಡುತ್ತಿರುವ ಪ್ರಗತಿಯನ್ನು ನೋಡಿ ಆಪ್ ಸೇರಿಕೊಂಡಿದ್ದೇನೆ,” ಎಂದು ಆನ್ಲೈನ್ ಮೂಲಕ ನಡೆಸಲಾದ ಸುದ್ಧಿಗೋಷ್ಠಿಯಲ್ಲಿ ಸಲ್ಡಾನಾ ತಿಳಿಸಿದ್ದಾರೆ. ಮನೋಹರ್ ಪರ‍್ರಿಕ್ಕರ್ ಕಾಲದಲ್ಲಿದ್ದ ಬಿಜೆಪಿ ಇದಲ್ಲ ಎಂದು ಕೇಸರಿ ಪಾಳೆಯದ ವಿರುದ್ಧ ಸಲ್ಡಾನಾ ಆಪಾದನೆ ಮಾಡಿದ್ದಾರೆ.
ಕೆಲವೊಂದು ಬಂಡವಾಳಶಾಹಿಗಳ ಲಾಭಕ್ಕಾಗಿ ರಾಜ್ಯದಲ್ಲಿ ಕೈಗೊಂಡಿರುವ ಮೂರು ಯೋಜನೆಗಳನ್ನು ತಮ್ಮ ಪಕ್ಷ ವಿರೋಧಿಸುತ್ತದೆ ಎಂದು ತಿಳಿಸಿದ ಕೇಜ್ರಿವಾಲ್, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜನತೆಯ ಅನುಮೋದನೆ ಇಲ್ಲದೇ ಯಾವುದೇ ಯೋಜನೆಯನ್ನೂ ಮಾಡುವುದಿಲ್ಲ ಎಂದಿದ್ದಾರೆ.