alex Certify ಇಬ್ಬರ ಜೊತೆ ಚಕ್ಕಂದವಾಡ್ತಿದ್ದ ವಿವಾಹಿತ ಮಾಡಿದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಬ್ಬರ ಜೊತೆ ಚಕ್ಕಂದವಾಡ್ತಿದ್ದ ವಿವಾಹಿತ ಮಾಡಿದ ಘೋರ ಕೃತ್ಯ

Goa Father killed two newborns promised two girls for wedding viral news |  Goa: पिता ने की अपने नवजात बच्चों की हत्या, शादी का झांसा देकर 2 लड़कियों  से बनाए संबंध |

ಗೋವಾದ ಪಣಜಿಯಲ್ಲಿ ಹತ್ಯೆಗೆ ಸಂಬಂಧಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಇಬ್ಬರು ನವಜಾತ ಮಕ್ಕಳ ಹತ್ಯೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ತ್ರಿಪಾಲ್ ನಾಯಕ್, ಒಡಿಶಾದ ಕಲಹಂಡಿ ನಿವಾಸಿ. ಗೋವಾದಲ್ಲಿ ಕಟ್ಟಡ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಇಬ್ಬರು ಮಹಿಳೆಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಎನ್ನಲಾಗಿದೆ. ಇಬ್ಬರೂ ಆತನ ಜೊತೆ ಕೆಲಸ ಮಾಡ್ತಿದ್ದರಂತೆ. ಒಬ್ಬಳಿಗೆ 30 ವರ್ಷವಾದ್ರೆ ಇನ್ನೊಬ್ಬಳಿಗೆ 22 ವರ್ಷ.

ಈಗಾಗಲೇ ಮದುವೆಯಾಗಿದ್ದ ವಿವಾಹಿತ, ಇಬ್ಬರಿಗೂ ಪ್ರಪೋಸ್ ಮಾಡಿದ್ದಾನೆ. ಇಬ್ಬರನ್ನೂ ಮದುವೆಯಾಗುವುದಾಗಿ ಹೇಳಿದ್ದಾನೆ. ಈ ಮಧ್ಯೆ ಮೊದಲ ಪ್ರೇಮಿಗೆ ಮಗು ಹುಟ್ಟಿದೆ. ಆ ಮಗುವನ್ನು ಇನ್ನೊಬ್ಬ ಪ್ರೇಮಿ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. ನಂತ್ರ ಎರಡನೇ ಪ್ರೇಮಿಗೂ ಮಗು ಹುಟ್ಟಿದೆ. ಕೆಲಸ ಮುಗಿದ ಕಾರಣ ಇಬ್ಬರೂ ಊರಿಗೆ ಹೋಗಬೇಕಾಗಿತ್ತಂತೆ. ಮರ್ಯಾದೆಗೆ ಹೆದರಿದ ವ್ಯಕ್ತಿ, ಪ್ರೇಮಿ ಜೊತೆ ಸೇರಿ ಮಗುವಿನ ಹತ್ಯೆ ಮಾಡಿದ್ದಾನೆ. ಎರಡೂ ಕೊಲೆಯನ್ನು ತಾನೇ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇಬ್ಬರು ಮಹಿಳೆಯರ ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...