alex Certify BIG NEWS: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಜಿ ಮೇಲ್​ ಸೇವೆಯಲ್ಲಿ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಜಿ ಮೇಲ್​ ಸೇವೆಯಲ್ಲಿ ವ್ಯತ್ಯಯ

ದೇಶದ ಅನೇಕ ಭಾಗಗಳಲ್ಲಿ ಇಂದು ಜಿಮೇಲ್​ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಬಹುತೇಕ ಜಿ ಮೇಲ್​ ಬಳಕೆದಾರರು ಇಂದು ಮೇಲ್​ ಕಳುಹಿಸಲು ಹಾಗೂ ಸ್ವೀಕರಿಸುವಲ್ಲಿ ಅಡಚಣೆಯನ್ನು ಕಂಡಿದ್ದಾರೆ.

ಭಾರತದ ಜಿ ಮೇಲ್​ ಬಳಕೆದಾರರಲ್ಲಿ 68 ಪ್ರತಿಶತ ಮಂದಿ ಇಂದು ಈ ವ್ಯತ್ಯಯದ ಸಂಬಂಧ ದೂರನ್ನು ನೀಡಿದ್ದಾರೆ. 18 ಪ್ರತಿಶತ ಮಂದಿ ಸರ್ವರ್​ ಕನೆಕ್ಷನ್​ ಸಮಸ್ಯೆಯನ್ನು ವರದಿ ಮಾಡಿದ್ದರೆ 14 ಪ್ರತಿಶತ ಮಂದಿ ಲಾಗಿನ್​ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ.

ಭಾರತದ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳ ಜಿ ಮೇಲ್​ ಬಳಕೆದಾರರು ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಇತರೆ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ವರದಿ ಮಾಡಿದ್ದಾರೆ.

ಆದರೆ ಈ ಸಂಬಂಧ ಜಿಮೇಲ್​ನಿಂದ ಯಾವುದೇ ಪ್ರತಿಕ್ರಿಯೆಗಳು ಇದುವರೆಗೂ ಲಭ್ಯವಾಗಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ವಿಶ್ವಾದ್ಯಂತ ಫೇಸ್​ಬುಕ್​, ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಯಲ್ಲಿ ಕೂಡ ವ್ಯತ್ಯಯ ಉಂಟಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...