alex Certify ತನ್ನ ಸಿರಿವಂತಿಕೆ ಗುಟ್ಟು ಬಿಚ್ಚಿಟ್ಟ ಮಾಡೆಲ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಸಿರಿವಂತಿಕೆ ಗುಟ್ಟು ಬಿಚ್ಚಿಟ್ಟ ಮಾಡೆಲ್​…!

ಹೇಗಾದರೂ ಮಾಡಿ ಹಣ ಗಳಿಸಬೇಕು ಎಂಬ ಆಸೆಗೆ ಬೀಳುವ ಕೆಲ ರೂಪದರ್ಶಿಗಳು Fanvue ಮತ್ತು OnlyFans ಎಂಬಂಥ ವಯಸ್ಕರ ವೆಬ್​ಸೈಟ್​ ಮೊರೆ ಹೋಗುತ್ತಿದ್ದಾರೆ. ತ್ವರಿತವಾಗಿ ಹಣ ಸಂಪಾದಿಸಲು ಇದು ಅವರಿಗೆ ಅಸ್ತ್ರವಾಗಿದೆ. ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಇದರ ಸಹಾಯ ಪಡೆಯುತ್ತಾರೆ. ಅಂಥವರಲ್ಲಿ ಒಬ್ಬಾಕೆ ಗ್ಲಾಸ್ಗೋದ 25 ವರ್ಷದ ಮಾಡೆಲ್​ ಕ್ಲೋಯ್. ಈಕೆ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾಳೆ.

ತನ್ನ ಮೊದಲ ಮನೆಯ ಅಡಮಾನವನ್ನು ಪಾವತಿಸಲು ಹೆಣಗಾಡುತ್ತಿದ್ದ ತನಗೆ ನೆರವಾದದ್ದು ಈ ವೆಬ್​ಸೈಟ್​ಗಳು ಎಂದು ಈಕೆ ಹೇಳಿಕೊಂಡಿದ್ದಾಳೆ. ಈಕೆ 2019 ರಲ್ಲಿ 2.1 ಲಕ್ಷ ಪೌಂಡ್‌ ಅಂದರೆ ಸರಿಸುಮಾರು 2 ಕೋಟಿ ರೂಪಾಯಿಗಳಿಗೆ ಮನೆ ಖರೀದಿಸಿದ್ದಳು. ಅದರ ಸಾಲ ತೀರಿಸಲು ಎರಡು ಪಾಳಿಯಲ್ಲಿ ಕೆಲಸ ಮಾಡತೊಡಗಿದಳು. ಎಷ್ಟೇ ದುಡಿದರೂ ಹಣ ಕಟ್ಟಲು ಸಾಧ್ಯವಾಗಲಿಲ್ಲ.

ನಂತರ ತಾನು ವಯಸ್ಕರಿಗೆ ಮಾತ್ರ ಚಂದಾದಾರಿಕೆ ಪುಟ Fanvue ನಲ್ಲಿ ವಯಸ್ಕ ವಿಷಯವನ್ನು ಬರೆಯಲು ಪ್ರಾರಂಭಿಸಿದೆ. ಇದರಿಂದ ಕೇವಲ 12 ವರ್ಷಗಳಲ್ಲಿ ಅವಳು ತನ್ನ ಸಂಪೂರ್ಣ ಸಾಲ ತೀರಿಸಿದೆ, ಮಾತ್ರವಲ್ಲದೇ ತಮ್ಮ ಫ್ಯಾನ್‌ವ್ಯೂ ಚಂದಾದಾರರಿಂದ ತಿಂಗಳಿಗೆ ಸುಮಾರು 57 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದೇನೆ ಎಂದಿದ್ದಾಳೆ.

ನಾನು ಮಾಡುವ ಕೆಲಸದ ಬಗ್ಗೆ ತನ್ನ ಸುತ್ತಲಿನ ಜನರಿಂದ ಕೆಲವು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದ್ದೇನೆ. ಆದರೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...