alex Certify ಹುಟ್ಟುಹಬ್ಬವನ್ನು ಸ್ಮರಣೀಯವನ್ನಾಗಿಸದ್ದಕ್ಕೆ ಗೆಳೆಯನ ಮೇಲೆ ಯುವತಿ ಸಿಡಿಮಿಡಿ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬವನ್ನು ಸ್ಮರಣೀಯವನ್ನಾಗಿಸದ್ದಕ್ಕೆ ಗೆಳೆಯನ ಮೇಲೆ ಯುವತಿ ಸಿಡಿಮಿಡಿ…! ವಿಡಿಯೋ ವೈರಲ್

ತಮ್ಮ ಹುಟ್ಟುಹಬ್ಬವನ್ನು ಬಹಳ ಚೆನ್ನಾಗಿ ಆಚರಿಸಬೇಕೆಂದು ಹಲವರು ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಹೆಣ್ಮಕ್ಕಳು ಇದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಪ್ರೀತಿ ಪಾತ್ರರು ನೀಡುವ ಉಡುಗೊರೆ ಬಗ್ಗೆಯೂ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿರುತ್ತಾರೆ. ಆದರೆ ನಿರೀಕ್ಷೆ ಹುಸಿಯಾದರೆ ಹೆಣ್ಮಕ್ಕಳು ಯಾವ ರೀತಿ ಪ್ರತಿಕ್ರಿಯೆ ಕೊಡಬಹುದು ಅನ್ನೋದನ್ನು ಯೋಚಿಸಿದ್ದೀರಾ..? ಸದ್ಯ ಇಲ್ಲೊಂದು ವಿಡಿಯೋ ಭಾರಿ ವೈರಲ್ ಆಗಿದೆ.

ಹೌದು, ಹುಟ್ಟುಹಬ್ಬವನ್ನು ಸ್ಮರಣೀಯವನ್ನಾಗಿಸಿಲ್ಲ ಎಂದು ಅಸಮಾಧಾನಗೊಂಡ ಯುವತಿಯೊಬ್ಬಳನ್ನು ಗೆಳೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಹುಟ್ಟುಹಬ್ಬದಂದು ಕೇಕ್ ತರುವುದಕ್ಕಿಂತ ವಿಶೇಷವಾಗಿ ಮಾಡುವಂಥದ್ದು ಬೇರೆಯೇ ಇದೆ ಎಂಬುದನ್ನು ಅರ್ಥ ಮಾಡಿಸಲು ಪ್ರಯತ್ನಿಸಿದ್ದಾನೆ. ಆದರೆ ಆಕೆ, ಪ್ರತಿವರ್ಷ ಹುಟ್ಟುಹಬ್ಬ ಆಚರಿಸುವುದನ್ನು ಯೋಜಿಸುವುದು ಹಾಗೂ ಮನೆಯನ್ನು ಸುಂದರವಾಗಿ ಅಲಂಕರಿಸುವುದಾಗಿ ಹೇಳಿದ್ದಾಳೆ. ಆದರೆ ಆಕೆಯನ್ನು ಮೆಚ್ಚಿಸಲು ಗೆಳೆಯ ಅಸಾಮಾನ್ಯವಾದಂಥದ್ದೇನು ಮಾಡುವುದಿಲ್ಲ. ಹೀಗಾಗಿ ಸಂತೋಷಪಡಿಸಲು ಏನು ಮಾಡಬೇಕೆಂದು ಗೆಳತಿಯನ್ನು ಪ್ರಶ್ನಿಸಿದ್ದಾನೆ.

ಡೀಪ್ ನೆಕ್ ಡ್ರೆಸ್ ನಲ್ಲಿ ಪಡ್ಡೆಗಳ ನಿದ್ರೆ ಕದ್ದ ಕಣ್ಸನ್ನೆ ಬೆಡಗಿ

“ನನಗೆ ಸುತ್ತಾಡುವ ಆಸೆ ಇಲ್ಲ, ನಾನು ವಿಶೇಷವಾಗಿ ಏನಾದರೂ ಮಾಡಲು ಆಸಕ್ತಿ ಹೊಂದಿದ್ದೇನೆ. ಏನು ವಿಶೇಷ ಮಾಡಬೇಕೆಂಬುದು ನಾನು ತಿಳಿಸುತ್ತೇನೆ ( ನಗುತ್ತಾ ಹೇಳಿದ್ದಾಳೆ), ನೀನು ಈ ಸಂದರ್ಭದಲ್ಲಿ ಯಾವುದೇ ಯೋಜನೆ ರೂಪಿಸಿಲ್ಲ ಎಂದರೆ ನಾನು ಕೇಕ್ ಕಟ್ ಮಾಡುವುದಿಲ್ಲ. ಕೇಕನ್ನು ನಿನ್ನ ಮುಖದ ಮೇಲೆ ಎಸೆಯುತ್ತೇನೆ” ಎಂದು ಆಕ್ರೋಶಭರಿತಳಾಗಿ ಕೊನೆಯದಾಗಿ ಹೇಳಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

https://twitter.com/ximpatientwolf/status/1429515512304869376?ref_src=twsrc%5Etfw%7Ctwcamp%5Etweetembed%7Ctwterm%5E1429515512304869376%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-girls-rant-on-her-boyfriend-not-doing-anything-special-on-her-birthday-is-too-relatable-watch-4909034%2F

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...