alex Certify ಸ್ಟೈಲ್​ ಮಾಡಲು ಹೋಗಿ ಬೈಕ್‌ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟೈಲ್​ ಮಾಡಲು ಹೋಗಿ ಬೈಕ್‌ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್​

ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು ಮುಖ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಪರಿಣಾಮವಾಗಿ, ಅವರು ಭಯಾನಕ ಫಲಿತಾಂಶ ಎದುರಿಸುತ್ತಾರೆ. ಕೆಲವೊಮ್ಮೆ ಎಷ್ಟೇ ಕೌಶಲ ಇದ್ದರೂ ಗ್ರಹಚಾರ ಕೆಟ್ಟಾಗ ವಿಪತ್ತು ಎದುರಾಗುತ್ತದೆ.

ಅಂಥದ್ದೇ ವಿಡಿಯೋ ಈಗ ವೈರಲ್​ ಆಗಿದೆ. ಭಾರವಾದ ಬೈಕಿನ ಮೇಲೆ ಸವಾರಿ ಮಾಡುವುದು ಕೆಲವರಿಗೆ ಸುಲಭವಾದರೂ ಹೆಣ್ಣುಮಕ್ಕಳ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಎಚ್ಚರಿಕೆ ಇರಬೇಕಾಗುತ್ತದೆ. ಇದಕ್ಕೆ ಸ್ವಲ್ಪ ಹೆಚ್ಚಿಗೆ ಪರಿಣತಿ ಮತ್ತು ಜವಾಬ್ದಾರಿಯ ಪ್ರಜ್ಞೆಯೂ ಅಗತ್ಯವಿರುತ್ತದೆ. ಆದರೆ ಯುವತಿಯೊಬ್ಬಳಿ ಬೈಕ್​ ರೈಡಿಂಗ್​ ವೇಳೆ ಸ್ಟೈಲ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ.

ಇದರ ವಿಡಿಯೋ ನೋಡಿ ಜನರು ನಗುವಂತಾಗಿದೆ. ಯುವತಿಯೊಬ್ಬಳು ಭಾರವಾದ ಮೋಟಾರ್‌ಸೈಕಲ್ ಚಲಾಯಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಬೈಕ್​ ಓಡಿಸುವ ಆಕೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಆದರೆ ಈಕೆ ಸುಮ್ಮನೇ ಇರದೇ ಕ್ಯಾಮೆರಾ ಕಡೆ ಕೈ ಬೀಸುತ್ತಾಳೆ, ನಗುತ್ತಾಳೆ, ಅವಳು ಸವಾರಿಯನ್ನು ಆನಂದಿಸುತ್ತಿದ್ದಾಳೆ ಎಂದು ಸೂಚಿಸುತ್ತಾಳೆ. ಇಷ್ಟೇ ಆದರೂ ಪರವಾಗಿರಲಿಲ್ಲ.

ಆಕೆ ಇನ್ನಷ್ಟು ಇಂಪ್ರೆಸ್​ ಮಾಡಲು ಹೋಗಿ ಬೈಕನ್ನು ಅಲುಗಾಡಿಸಲು ಪ್ರಾರಂಭಿಸುತ್ತಾಳೆ. ಆಗಲೇ ಆಗುವುದು ಎಡವಟ್ಟು. ಸ್ವಲ್ಪ ಸಮಯದೊಳಗೆ ತನ್ನ ಸಮತೋಲನವನ್ನು ಕಳೆದುಕೊಂಡು ಕೆಳಗೆ ಬೀಳುತ್ತಾಳೆ ಮತ್ತು ಬೈಕು ಕೆಲವು ಅಡಿಗಳಷ್ಟು ಮುಂದೆ ಚಲಿಸುತ್ತದೆ. ಅದೃಷ್ಟವಶಾತ್​ ಏನೂ ಅನಾಹುತ ಆಗಲಿಲ್ಲ. ಈ ವಿಡಿಯೋವನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಯುವತಿಗೆ ಬುದ್ಧಿ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...