
ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಕ್ಲಬ್‌ಗಳು ಎಲ್ಲಾ ವಯೋಮಾನದ ಜನರನ್ನು ಸಂತಸದಲ್ಲಿ ತೇಲಿಸುವ ತಾಣ. ಇದರಲ್ಲಿರುವ ಆಟೋಟಗಳನ್ನು ಎಲ್ಲರೂ ಎನ್ಜಾಯ್ ಮಾಡುತ್ತಾರೆ. ಅದರಲ್ಲಿಯೂ ಸಾಹಸ ಆಟಗಳನ್ನು ಆಡಲು ಮತ್ತು ವಿವಿಧ ರೀತಿಯ ಸವಾರಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ.
ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ವೈರಲ್ ಆಗಲು ಕಾರಣ, ಸಾಹಸಮಯ ಆಟ ಆಡಲು ಹೋದ ಯುವತಿಯಿಂದ ಆಗಿರುವ ಎಡವಟ್ಟಿನಿಂದಾಗಿ ! ಹೌದು. ಬಾಕ್ಸಿಂಗ್ ಮಾಡಲು ಹೋದ ಯುವತಿಯೊಬ್ಬಳು ಮಾಡಿದ ಎಡವಟ್ಟು ನೆಟ್ಟಿಗರುನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.
ಇದರ ವಿಡಿಯೋ ವೈರಲ್ ಆಗಿದೆ. ಹುಡುಗಿಯೊಬ್ಬಳು ಸ್ಪೀಡ್ ಬ್ಯಾಗ್‌ಗೆ ಹೊಡೆಯಲು ಸಿದ್ಧಳಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಫುಲ್ ಜೋಶ್ನಿಂದ ಬ್ಯಾಗ್‌ಗೆ ಹೊಡೆಯಲು ಈಕೆ ತಯಾರಿ ನಡೆಸಿದ್ದು, ನಂತರ ಹೊಡೆದಿದ್ದಾಳೆ ಕೂಡ. ಆದರೆ ದುರದೃಷ್ಟವಶಾತ್ ಆಕೆ ಗುದ್ದಿದ್ದು ಬ್ಯಾಗ್‌ಗೆ ಅಲ್ಲ ಬದಲಿಗೆ ಬ್ಯಾಗ್ ಪಕ್ಕದಲ್ಲಿ ನಿಂತಿರೋ ತನ್ನ ಗೆಳೆಯನ ಮುಖಕ್ಕೆ! ಇದರ ವಿಡಿಯೋ ವೈರಲ್ ಆಗಿದ್ದು, ಹಲವಾರು ರೀತಿಯ ತಮಾಷೆಯ ಕಮೆಂಟ್ಸ್ ಬರುತ್ತಿವೆ.
https://twitter.com/1000waystod1e/status/1626924816560427010?ref_src=twsrc%5Etfw%7Ctwcamp%5Etweetembed%7Ctwterm%5E1626924816560427010%7Ctwgr%5Eef8d65c84d57e465b0f3ea5780a59ae8c238631e%7Ctwcon%5Es1_&ref_url=https%3A%2F%2Fwww.india.com%2Fviral%2Fgirl-mistakes-boyfriends-face-for-punching-bag-and-its-ooh-aah-ouch-for-him-watch-viral-video-5905435%2F