ಡಿಎನ್ಎ ಪರೀಕ್ಷೆಗೆ ಒಳಗಾಗಿದ್ದ ಯುವತಿಗೆ ತನಗೆ 50 ಮಂದಿ ಸಹೋದರ ಹಾಗೂ ಸಹೋದರಿಯರು ಇದ್ದಾರೆ ಎಂಬ ಶಾಕಿಂಗ್ ಮಾಹಿತಿ ತಿಳಿದುಬಂದಿದೆ. ಅಂದಹಾಗೆ ಈ ವಿಚಾರ ಯುವತಿಗೆ ಮೊದಲು ತಿಳಿದಿರಲಿಲ್ಲ. ಹೀಗಾಗಿ ತನ್ನ ಭವಿಷ್ಯ ಏನಾಗಬಹುದೆಂದು ಯುವತಿ ಚಿಂತೆ ಮಾಡುವಂತಾಗಿದೆ.
ಟಿಕ್ಟಾಕ್ ಬಳಕೆದಾರಳಾದ ಯುವತಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ತನ್ನ ಪೋಷಕರು ಯಾರೆಂದು ತಿಳಿದುಕೊಳ್ಳುವ ಸಲುವಾಗಿ ಯುವತಿ 2018ರಲ್ಲಿ ಡಿಎನ್ಎ ಪರೀಕ್ಷೆಗೆ ಒಳಗಾಗಿದ್ದಳು. ಈ ವೇಳೆ ಪರೀಕ್ಷಾ ವರದಿಯನ್ನು ಕಂಡು ಯುವತಿ ಬೆಚ್ಚಿಬಿದ್ದಿದ್ದಾಳೆ.
ಮಾತ್ರವಲ್ಲದೇ ಮಹಿಳೆಯೊಬ್ಬರು ತನ್ನ ಮಗಳ ಡಿಎನ್ಎ ಕೂಡ ನಿಮಗೆ ಮ್ಯಾಚ್ ಆಗ್ತಿದೆ ಎಂದು ಸಂದೇಶ ಕಳುಹಿಸಿದ ಬಳಿಕ ಈಕೆಗೆ ಆಘಾತವೇ ಉಂಟಾಗಿದೆ.
ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಸಚಿವರಿಂದ ಸಿಹಿ ಸುದ್ದಿ
ಅಂದಹಾಗೆ ಈ ಯುವತಿಯು ವೀರ್ಯ ದಾನಿಯೊಬ್ಬರಿಗೆ ಜನಿಸಿದ ಮಗುವಾಗಿದ್ದಳು. ವೀರ್ಯ ದಾನಿಯ ಸಹಾಯದಿಂದ ಈಕೆಯ ತಾಯಿ ಜನ್ಮ ನೀಡಿದ್ದರು. ಆದರೆ ತಾಯಿಗೆ ಮುಂದಿನ ದಿನಗಳಲ್ಲಿ ತನ್ನ ಮಗಳು ವೀರ್ಯ ದಾನಿಯ ಹುಡುಕಾಟ ನಡೆಸಬಹುದು ಎಂಬ ಕಿಂಚಿತ್ ಐಡಿಯಾ ಕೂಡ ಇದ್ದಿರಲಿಕ್ಕಿಲ್ಲ.
ಮಗಳಿಗೂ ಸಹ ತನ್ನ ಜನ್ಮ ಈ ರೀತಿ ಆಗಿರಬಹುದು ಎಂದೂ ತಿಳಿದಿರಲಿಲ್ಲ. ಈ ಡಿಎನ್ಎ ಪರೀಕ್ಷೆ ಬಳಿಕ ಯುವತಿ ಫೇಸ್ಬುಕ್ನಲ್ಲಿ ಒಡಹುಟ್ಟಿದವರು ಎಂಬ ಫೇಸ್ಬುಕ್ ಗ್ರೂಪ್ ಕ್ರಿಯೇಟ್ ಮಾಡಿದಳು. ಈ ಫೇಸ್ಬುಕ್ ಪೇಜ್ ಮೂಲಕ ತನ್ನ 50 ಮಂದಿ ಸಹೋದರ, ಸಹೋದರಿಯರನ್ನು ಯುವತಿ ಪತ್ತೆ ಮಾಡಿದ್ದಾಳೆ.