ಶಾಲಾ ಶುಲ್ಕ ಪಾವತಿ ಮಾಡದೇ ಇರುವ ವಿಚಾರವಾಗಿ ಪ್ರಿನ್ಸಿಪಾಲರು ಅವಮಾನ ಮಾಡಿದ ಬಳಿಕ 14 ವರ್ಷದ ಟೀನೇಜರ್ ಒಬ್ಬಳು ನಿಗೂಢ ಪರಿಸ್ಥಿತಿಯಲ್ಲಿ ಮೃತ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ.
ಹುಡುಗಿಯ ಸಾವಿನ ಸಂಬಂಧ ಪ್ರಿನ್ಸಿಪಾಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಾಲಾ ಶುಲ್ಕ ಪಾವತಿ ಮಾಡಲು ಕಾಲಾವಕಾಶ ಕೋರಿದರೂ ಪ್ರಿನ್ಸಿಪಾಲರು ಒಪ್ಪಲಿಲ್ಲ ಎಂದು ಹುಡುಗಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ತನ್ನ ಅಸೈನ್ಮೆಂಟ್ ಸಲ್ಲಿಸಲು ಪ್ರಿನ್ಸಿಪಾಲರು ತಮ್ಮ ಮಗಳಿಗೆ ಅವಕಾಶ ಕೊಡಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅತ್ಯಾಚಾರದ ಆರೋಪ ಮಾಡಿದ್ದ ಬಾಂಗ್ಲಾ ನಟಿ ಅರೆಸ್ಟ್
ಆಹಾರದಲ್ಲಿ ಹೆಚ್ಚುಕಮ್ಮಿಯಾದ ಕಾರಣದಿಂದ ಬಾಲಕಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
“ಉನ್ನಾವೋದ ನಾನೊಬ್ಬ ಬಡ ಕಾರ್ಮಿಕ. ನನ್ನ ಮಗಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ನನ್ನ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದ್ದ ಕಾರಣ, ಕೋವಿಡ್ ಸಾಂಕ್ರಮಿಕದ ಅವಧಿಯಲ್ಲಿ ಮೂರು ತಿಂಗಳ ಮಟ್ಟಿಗೆ ಶಾಲಾ ಶುಲ್ಕ ಪಾವತಿ ಮಾಡಲು ಸಾಧ್ಯವಾಗಲಿಲ್ಲ” ಎಂದು ದೂರಿನಲ್ಲಿ ತಿಳಿಸಿರುವ ಆಕೆಯ ತಂದೆ, “ಶಾಲಾ ಶುಲ್ಕ ಕಟ್ಟದೇ ಇದ್ದ ಕಾರಣ ತ್ರೈಮಾಸಿಕ ಪರೀಕ್ಷೆಯಲ್ಲಿ ಭಾಗಿಯಾಗಲು ಪ್ರಿನ್ಸಿಪಾಲರು ಅವಕಾಶ ಕೊಡದೇ ಇದ್ದ ಕಾರಣ ಅಲ್ಲೇ ಕುಸಿದ ನನ್ನ ಮಗಳು, ಮನೆ ತಲುಪುತ್ತಲೇ ಮಾನಸಿಕ ಒತ್ತಡ ಹಾಗೂ ಅತಿಯಾದ ಅವಮಾನದಿಂದ ಮೃತಪಟ್ಟಿದ್ದಾಳೆ” ಎಂದು ವಿವರಿಸಿದ್ದಾರೆ.