alex Certify ಕೋಕ್ ನಿಂದ ತಯಾರಾದ ಮ್ಯಾಗಿ ನೋಡಿ ಮುಖ ಸಿಂಡರಿಸಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಕ್ ನಿಂದ ತಯಾರಾದ ಮ್ಯಾಗಿ ನೋಡಿ ಮುಖ ಸಿಂಡರಿಸಿದ ಜನ

ಮ್ಯಾಗಿ ನೂಡಲ್ಸ್ ಅಂದ್ರೆ ಬಹುತೇಕ ಭಾರತೀಯ ಆಹಾರಪ್ರಿಯರ ಅಚ್ಚುಮೆಚ್ಚಿನ ಖಾದ್ಯ ಎಂದರೆ ತಪ್ಪಿಲ್ಲ. ಇದರಲ್ಲಿ ಹಲವಾರು ಪ್ರಯೋಗಗಳನ್ನು ಮಾಡಲಾಗಿದೆ. ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ, ಪಕೋಡಾ ಮ್ಯಾಗಿ ಮುಂತಾದವುಗಳನ್ನು ನೀವು ತಿಂದಿರ್ತೀರಾ…. ಈ ನಡುವೆ ಹಲವಾರು ವಿಲಕ್ಷಣ ಮ್ಯಾಗಿಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿವೆ. ಇದೀಗ ಮತ್ತೊಂದು ಹೊಸ ಮ್ಯಾಗಿ ರೆಸಿಪಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕ್ಯಾಕರಿಸಿದ್ದಾರೆ.

ಹೌದು, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಬೀದಿ ವ್ಯಾಪಾರಿಯೊಬ್ಬರು ನೀರಿನ ಬದಲು ಕೋಕಾಕೋಲಾವನ್ನು ಬಳಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ.

ಮ್ಯಾಗಿ ತಯಾರಕ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿದ್ದು, ನಂತರ ತರಕಾರಿ ಸೇರಿಸಿ ಫ್ರೈ ಮಾಡಿದ್ದಾರೆ. ಜೊತೆಗೆ ಉಪ್ಪು, ಮಸಾಲೆ ಸೇರಿಸಿ ಮಿಕ್ಸ್ ಮಾಡಿ ನೀರಿನ ಬದಲು ಕೋಕಾಕೋಲವನ್ನು ಹಾಕಿದ್ದಾರೆ. ನಂತರ ಮ್ಯಾಗಿ ನೂಡಲ್ಸ್ ಹಾಗೂ ಮಸಾಲ ಮ್ಯಾಗಿಯನ್ನು ಸೇರಿಸಿ ಎರಡು ನಿಮಿಷ ಬೇಯಿಸಿದ್ದಾರೆ. ಖಾದ್ಯ ತಯಾರಾದ ಕೂಡಲೇ ಪ್ಲೇಟ್ ಗೆ ವರ್ಗಾಯಿಸಿ ಗ್ರಾಹಕರಿಗೆ ನೀಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬಳಿಕ, 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕೆಲವರು ಅಸಹ್ಯಕರ ಎಂದು ಪ್ರತಿಕ್ರಿಯಿಸಿದ್ರೆ, ಇನ್ನೂ ಕೆಲವರು ವ್ಯಾಕ್ ಎಂದು ಉಗಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...