alex Certify ಬಿದಿರಿನ ಬಟ್ಟೆ ಧರಿಸಿ ಈ ಪ್ರಯೋಜನ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದಿರಿನ ಬಟ್ಟೆ ಧರಿಸಿ ಈ ಪ್ರಯೋಜನ ಪಡೆಯಿರಿ

ಇಂದಿನ ಫ್ಯಾಶನ್ ಯುಗದಲ್ಲಿ ನಮಗೆ ಹಲವು ವಿಧದ ಬಟ್ಟೆಗಳು ಲಭ್ಯವಾಗುತ್ತಿದೆ. ಇದರಲ್ಲಿ ಬಿದಿರಿನ ಬಟ್ಟೆ ಕೂಡ ಒಂದು. ಹತ್ತಿ ಬಟ್ಟೆಗೆ ಹೋಲಿಸಿದರೆ ಬಿದಿರಿನ ಬಟ್ಟೆ ಕೂಡ ಧರಿಸಲು ತುಂಬಾ ಅನುಕೂಲಕರವಾಗಿರುತ್ತದೆ. ಹಾಗಾಗಿ ಬಿದಿರಿನ ಬಟ್ಟೆಗಳನ್ನು ಧರಿಸುವುದರಿಂದ ನಿಮಗೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ.

ಈ ಬಟ್ಟೆಯು ಅತ್ಯಂತ ಮೃದುವಾಗಿದೆ. ಇದು ಒರಟಾಗಿರುವುದಿಲ್ಲ. ಹಾಗಾಗಿ ಇದು ಚರ್ಮದ ಸಂಪರ್ಕಕ್ಕೆ ಬಂದಾಗ ಮೃದುವಾಗುತ್ತದೆ ಮತ್ತು ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮನ್ನು ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಹಾಗಾಗಿ ಈ ಬಟ್ಟೆಗಳನ್ನು ಬೇಸಿಗೆ ಕಾಲದಲ್ಲಿ ಬಳಸಿದರೆ ತುಂಬಾ ಒಳ್ಳೆಯದು.

ಈ ಬಟ್ಟೆಯನ್ನು ಧರಿಸಿದರೆ ದೀರ್ಘಕಾಲದವರೆಗೆ ತಾಜಾವಿರಬಹುದು. ಯಾಕೆಂದರೆ ಬಿದಿರಿನ ನಾರಿನಲ್ಲಿ ಸೂಕ್ಷ್ಮ ರಂಧ್ರಗಳಿದ್ದು ಇದು ಗಾಳಿಯಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ತಾಜಾತನವನ್ನು ಅನುಭವಿಸಬಹುದು.

ಇದು ಬೆವರನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಬೆವರನ್ನು ಚರ್ಮದಲ್ಲಿ ಒಣಗಲು ಬಿಡುವುದಿಲ್ಲ. ಇದರಿಂದ ಬ್ಯಾಕ್ಟೀರಿಯಾಗಳಿಂದ ಚರ್ಮದ ಸಮಸ್ಯೆ ಕಾಡಲ್ಲ. ಬಿದಿರಿನ ಬಟ್ಟೆಗೆ ಇಸ್ತ್ರಿ ಮಾಡುವ ಅಗತ್ಯವಿರುವುದಿಲ್ಲ. ಯಾಕೆಂದರೆ ಈ ಬಟ್ಟೆಗಳು ಸುಕ್ಕುಗಟ್ಟುವುದಿಲ್ಲ. ಮತ್ತು ಇದನ್ನು
ಎಷ್ಟು ಬಾರಿ ತೊಳೆದರು ಇದು ಸುಕ್ಕುಗಟ್ಟುವುದಿಲ್ಲ. ಬಿದಿರಿನ ಬಟ್ಟೆ ದೇಹವನ್ನು ಶಾಖದಿಂದ ಕಾಪಾಡುತ್ತದೆ ಮತ್ತು ಚಳಿಯಿಂದ ರಕ್ಷಿಸುತ್ತದೆ. ಅಲ್ಲದೇ ಇದು ಚರ್ಮ ಸರಿಯಾಗಿ ಉಸಿರಾಡಲು ಸಹಕರಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...