ಹೊಟ್ಟೆಯಲ್ಲಿ ಕಲ್ಮಶ ಸೇರಿಕೊಂಡು ಪದೇ ಪದೇ ನಿಮಗೆ ಹೊಟ್ಟೆ ನೋವಿನ ಸಮಸ್ಯೆ ಕಾಡುತ್ತಿರಬಹುದು ಇಲ್ಲವೇ ವಾಯು ಸಮಸ್ಯೆ ಅಥವಾ ಪದೇ ಪದೇ ಬೇಧಿಯಾಗಬಹುದು. ಇದನ್ನು ತಡೆಯಲು ಈ ಪಾನೀಯಗಳನ್ನು ಸೇವಿಸಿ. ಹೊಟ್ಟೆಯ ಕಲ್ಮಶಗಳನ್ನು ಆಗಾಗ ಹೊರ ಹಾಕುತ್ತಿರಿ.
ಹೊಟ್ಟೆಯೊಳಗೆ ಕುಳಿತಿರುವ ಕೆಲವು ಬ್ಯಾಕ್ಟೀರಿಯಾಗಳು ನೀವು ಬೇರೆ ಬೇರೆ ಉತ್ಪನ್ನಗಳನ್ನು ಸೇವಿಸಿದಾಗ ಬೇರೆಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ. ಕೆಲವೊಮ್ಮೆ ಇವೇ ಅಪಾಯಕಾರಿಯಾಗಿ ಬದಲಾಗುತ್ತವೆ. ಇವುಗಳನ್ನು ನಿವಾರಿಸಲು ಪಪ್ಪಾಯ ಎಲೆಗಳು ಹೆಚ್ಚು ಸೂಕ್ತ.
ಪಪ್ಪಾಯ ಎಲೆಗಳನ್ನು ಜಜ್ಜಿ ರಸ ತೆಗೆಯಿರಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ. ಇದರಿಂದ ಕರುಳ ಗೋಡೆಯಲ್ಲಿ ಅವಿತ ಜಂತುಗಳು ಸಾಯುತ್ತವೆ ಮತ್ತು ಸೂಕ್ಷ್ಮ ಬ್ಯಾಕ್ಟೀರಿಯಾಗಳು ಹೊರಹೋಗುತ್ತವೆ.
ಆದರೆ ಇದನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸೇವಿಸಿದರೆ ಸಾಕು, ಹೆಚ್ಚು ಸೇವಿಸಿದರೆ ದೇಹಕ್ಕೆ ಉಷ್ಣವಾಗಬಹುದು. ಇದನ್ನು ಒಂದು ತಿಂಗಳ ತನಕ ಸೇವಿಸಿದರೆ ಹೊಟ್ಟೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.