ಮೊನಾಕೋ ರಾಜಕುಮಾರಿ ಕ್ಯಾರೋಲಿನ್ ಪತಿ ಹ್ಯಾನೋವರ್ ಪ್ರಿನ್ಸ್ ಅರ್ನ್ಸ್ಟ್ ಅಗಸ್ಟ್, ಕೋಟೆ ಸಾರ್ವಜನಿಕರ ಸ್ವತ್ತಾಗದಂತೆ ಮಾಡುವ ಸಲುವಾಗಿ ತನ್ನ ಮಗನಿಂದ ಆಸ್ತಿಯನ್ನ ಹಿಂಪಡೆಯಲು ಮೊಕದ್ದಮೆ ಹೂಡಿದ್ದಾರೆ ಎಂದು ನ್ಯಾಯಾಲಯ ಮಾಹಿತಿ ನೀಡಿದೆ.
66 ವರ್ಷದ ಅರ್ನ್ಸ್ಟ್ ಅಗಸ್ಟ್ ತನ್ನ ಮಗನಿಗೆ 2004 ಹಾಗೂ 2007ರ ಅವಧಿಯಲ್ಲಿ ಮೆರಿಯನ್ಬರ್ಗ್ ಕೋಟೆ ಸೇರಿದಂತೆ ವಿವಿಧ ಆಸ್ತಿಗಳನ್ನ ನೀಡಿದ್ದರು. ಆದರೆ ಮಿಲಿಯನ್ಗಟ್ಟಲೇ ಮೌಲ್ಯ ಹೊಂದಿರುವ ಈ ಆಸ್ತಿಯನ್ನ ಆಗಸ್ಟ್ ಪುತ್ರ ಸರ್ಕಾರಕ್ಕೆ ಕೇವಲ 1 ಯುರೋ ಅಂದ್ರೆ ಅಂದ್ರೆ ಸರಿ ಸುಮಾರು 87 ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ತನ್ನ ಪುತ್ರ ಕುಟುಂಬ ವಿರೋಧಿ ಕಾರ್ಯ ಮಾಡಿದ್ದಾರೆ ಹಾಗೂ ನಮ್ಮ ಕುಟುಂಬದ ಸ್ವತ್ತನ್ನ ಸಾರ್ವಜನಿಕ ಆಸ್ತಿಯನ್ನಾಗಿ ಮಾಡುವ ಮೂಲಕ ದ್ರೋಹ ಎಸಗಿದ್ದಾರೆ ಎಂದು ಪ್ರಿನ್ಸ್ ಅರ್ನ್ಸ್ಟ್ ಅಗಸ್ಟ್ ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದಾರೆ.