ಜರ್ಮನಿಯ 8600ರಷ್ಟು ಮಂದಿ ಕೋವಿಡ್ ಲಸಿಕೆ ಬದಲಿಗೆ ಲವಣಯುಕ್ತ ದ್ರಾವಣವನ್ನು ಲಸಿಕೆ ರೂಪದಲ್ಲಿ ಪಡೆದಿದ್ದಾರೆ. ಹೀಗಾಗಿ ಮತ್ತೊಮ್ಮೆ ಲಸಿಕೆ ಪಡೆಯಲು ಈ ಎಲ್ಲಾ ಮಂದಿಗೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಉತ್ತರ ಜರ್ಮನಿಯ ಫ್ರೈಸ್ಲೆಂಡ್‌ನ ಲಸಿಕಾ ಕೇಂದ್ರದಲ್ಲಿ ಕೆಲಸ ಮಾಡುವ ರೆಡ್ ಕ್ರಾಸ್ ನರ್ಸ್ ಒಬ್ಬರು ಮಾಡಿರುವ ಫಜೀತಿಯಿಂದಾಗಿ ಸಾವಿರಾರು ಮಂದಿಗೆ ಕೋವಿಡ್ ಲಸಿಕೆಯ ಹೆಸರಲ್ಲಿ ಹುಸಿ ಡೋಸ್ ಕೊಡಲಾಗಿದೆ.
ಸಂತ್ರಸ್ತರ ಪೈಕಿ ಬಹುತೇಕ ಮಂದಿ 70 ವರ್ಷದ ಮೇಲ್ಪಟ್ಟವರಾಗಿದ್ದು, ಕೋವಿಡ್ ಸಂಬಂಧಿ ಅಡ್ಡಪರಿಣಾಮಗಳ ರಿಸ್ಕ್ ಇವರಲ್ಲಿ ಜೋರಾಗಿದೆ.