alex Certify ತರಕಾರಿ ಖರೀದಿಗೆ UPI ಬಳಸಿದ ಜರ್ಮನ್ ಸಚಿವ: ಡಿಜಿಟಲ್ ಪಾವತಿ ಮಾದರಿಗೆ ಆಕರ್ಷಿತರಾಗಿ ಪ್ರಶಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಕಾರಿ ಖರೀದಿಗೆ UPI ಬಳಸಿದ ಜರ್ಮನ್ ಸಚಿವ: ಡಿಜಿಟಲ್ ಪಾವತಿ ಮಾದರಿಗೆ ಆಕರ್ಷಿತರಾಗಿ ಪ್ರಶಂಸೆ

ನವದೆಹಲಿ: ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿಯು ಭಾನುವಾರ ಭಾರತದ ಡಿಜಿಟಲ್ ಮೂಲ ಸೌಕರ್ಯವನ್ನು ಶ್ಲಾಘಿಸಿದ್ದು, ಇದನ್ನು ದೇಶದ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ ಎಂದು ಕರೆದಿದೆ.

ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆಯ ಫೆಡರಲ್ ಮಂತ್ರಿ ವೋಲ್ಕರ್ ವಿಸ್ಸಿಂಗ್ ಅವರು ಭಾರತದಲ್ಲಿ ಪಾವತಿ ಮಾಡಲು UPI ಅನ್ನು ಬಳಸಿದ್ದು, ಅದರ ಅನುಭವದಿಂದ ಬಹಳ ಆಕರ್ಷಿತರಾದರು. ನಂತರ ಭಾರತದ ಡಿಜಿಟಲ್ ಪಾವತಿ ಮಾದರಿಗೆ ಹೆಚ್ಚಿನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 19 ರಂದು ಬೆಂಗಳೂರಿನಲ್ಲಿ G20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ವಿಸ್ಸಿಂಗ್ ಭಾಗವಹಿಸಿದ್ದರು. ಆಗಸ್ಟ್ 18 ರಂದು ವಿಸ್ಸಿಂಗ್ ಜಿ20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದರು.

ಅವರು ತರಕಾರಿ ಮಾರಾಟಗಾರನಿಗೆ ಪಾವತಿ ಮಾಡಲು ವಿಸ್ಸಿಂಗ್ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(UPI) ಬಳಸುವುದನ್ನು ಕಾಣಬಹುದು. ಇದನ್ನು ಟ್ವಿಟ್ಟರ್ ನಲ್ಲಿ ಭಾರತದ ಜರ್ಮನ್ ರಾಯಭಾರ ಕಚೇರಿ ಪೋಸ್ಟ್ ಮಾಡಿದೆ.

ಭಾರತದ ಯಶಸ್ಸಿನ ಕಥೆ ಡಿಜಿಟಲ್ ಮೂಲಸೌಕರ್ಯವಾಗಿದೆ. UPI ಪ್ರತಿಯೊಬ್ಬರನ್ನು ಸೆಕೆಂಡುಗಳಲ್ಲಿ ವಹಿವಾಟು ಮಾಡಲು ಅನುವು ಮಾಡಿಕೊಡುತ್ತದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಾರೆ. ಸಚಿವ ವಿಸ್ಸಿಂಗ್ ಅವರು UPI ಪಾವತಿಗಳ ಸರಳತೆ ಕಂಡು ಆಕರ್ಷಿತರಾಗಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...