ಅಫ್ಘಾನಿಸ್ತಾನದಲ್ಲಿರುವ ಜರ್ಮನಿ ಮಿಲಿಟರಿ ಪಡೆಗಳ ಸೈನಿಕರು ಆಲ್ಕೋಹಾಲ್ ಬಳಸುವುದನ್ನು ಕಮಾಂಡಿಂಗ್ ಅಧಿಕಾರಿ ನಿರ್ಬಂಧಿಸಿರುವ ಕಾರಣ ಅವರಿಗೆಂದೇ ತರಲಾಗಿದ್ದ ಬಿಯರ್, ವೈನ್ ಹಾಗೂ ಮಿಶ್ರ ಪೇಯಗಳ ಬಾಟಲಿಗಳು ರಾಶಿ ರಾಶಿ ಹಾಗೇ ಬಿದ್ದಿವೆ.
ಜರ್ಮನಿ ಸೈನಿಕರಿಗೆ ಸಾಮಾನ್ಯವಾಗಿ ಪ್ರತಿನಿತ್ಯ ಎರಡು ಕ್ಯಾನ್ ಬಿಯರ್ ಕುಡಿಯಲು ಕೊಡಲಾಗುತ್ತದೆ. ಆದರೆ ಅಫ್ಘಾನಿಸ್ತಾನದಲ್ಲಿ ಭದ್ರತಾ ಕಾರಣಗಳಿಂದ ಜರ್ಮನ್ ಸೈನಿಕರಿಗೆ ತಾತ್ಕಾಲಿಕವಾಗಿ ಆಲ್ಕೋಹಾಲ್ ನಿರ್ಬಂಧಿಸಿಲಾಗಿದೆ.
ಗರ್ಭಪಾತವಾದ ಕಾರಣಕ್ಕೆ ಜೈಲು ಪಾಲಾಗಿದ್ದ ಮಹಿಳೆ ಕೊನೆಗೂ ಬಿಡುಗಡೆ
ಇದೀಗ ಅಫ್ಘಾನಿಸ್ತಾನದಲ್ಲಿ ಬಳಸದೇ ಬಿಟ್ಟಿರುವ ಸ್ಟಾಕ್‌ಗಳನ್ನು ಮರಳಿ ಜರ್ಮನಿಗೆ ತರಲು ನಾಗರಿಕ ಕಾಂಟ್ರಾಕ್ಟರ್ ಒಬ್ಬರನ್ನು ನೇಮಿಸಿದ್ದು, ಮುಂಬರುವ ತಿಂಗಳುಗಳಲ್ಲಿ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಮಿಶನ್ ಅಂತ್ಯವಾಗಲಿರುವ ಕಾರಣ ಆಗ ಅಲ್ಲಿಂದ ಸ್ವದೇಶಕ್ಕೆ ಮರಳಿ ಬರಲಿರುವ ಜರ್ಮನ್ ತುಕಡಿಗಳಿಗೂ ಮುನ್ನ ಈ ಸ್ಟಾಕ್ ಅನ್ನು ವಾಪಸ್ ತರಲು ಕ್ರಮ ವಹಿಸಲಾಗಿದೆ ಎಂದು ರಕ್ಷಣಾ ಇಲಖೆಯ ವಕ್ತಾರೆ ಕ್ರಿಸ್ಟಿನಾ ರೌಟ್ಸಿ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ: ಆಂಬುಲೆನ್ಸ್ ಚಾಲಕನಿಂದ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನ
22,600 ಲೀಟರ್ (6,000 ಗ್ಯಾಲನ್) ಆಲ್ಕೋಹಾಲ್, 60,000 ಕ್ಯಾನ್ ಬಿಯರ್ ಸೇರಿ, ಅಫ್ಘಾನಿಸ್ತಾನದಲ್ಲಿ ಕೊಳೆಯುತ್ತಿದ್ದು, ಧಾರ್ಮಿಕ ಕಾರಣಗಳಿಂದ ಅಲ್ಲಿನ ಜನತೆಗೆ ಈ ಸಂಗ್ರಹವನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಪರ್ಯಾವರಣದ ಕಾರಣಗಳಿಂದ ನಾಶಪಡಿಸಲೂ ಆಗುತ್ತಿಲ್ಲ ಎಂದು ಜರ್ಮನ್ ಸೇನೆ ತಿಳಿಸಿದೆ.
ಈ ಸ್ಟಾಕ್ ಅನ್ನು ಮಾರಾಟ ಮಾಡುವ ಕಾಂಟ್ರಾಕ್ಟರ್, ಅದರಿಂದ ಬಂದ ಲಾಭದಲ್ಲಿ, ಅಫ್ಘಾನಿಸ್ತಾನದಿಂದ ಸಂಗ್ರಹವನ್ನು ಹೊರಗೆ ತರಲು ತಗಲುವ ಸಾಗಾಟದ ವೆಚ್ಚವನ್ನೂ ಭರಿಸಬೇಕಾಗುತ್ತದೆ.