alex Certify ʼಜೆಮ್ಸ್ʼ​ vs​ ಜೇಮ್ಸ್​ ಬಾಂಡ್​: ಕ್ಯಾಡ್ಬರಿ ಪರವಾಗಿ ನ್ಯಾಯಾಲಯದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜೆಮ್ಸ್ʼ​ vs​ ಜೇಮ್ಸ್​ ಬಾಂಡ್​: ಕ್ಯಾಡ್ಬರಿ ಪರವಾಗಿ ನ್ಯಾಯಾಲಯದ ತೀರ್ಪು

ಜೆಮ್ಸ್​ ಯಾರಿಗೆ ಗೊತ್ತಿಲ್ಲ ಹೇಳಿ. ಮಕ್ಕಳಿಗೆ ಜೆಮ್ಸ್​ ಇಷ್ಟ, ಮಕ್ಕಳಿಗಾಗಿ ಜೆಮ್ಸ್​ ಖರೀದಿಸುವ ಪೋಷಕರಿಗೂ ಅದರ ಅರಿವಿದೆ. ಆದರೆ ಇದರದ್ದೊಂದು ಕೋರ್ಟ್​ ವ್ಯಾಜ್ಯ ಬಹಳ ರೋಚಕವಾಗಿದೆ.

ಈ ಹಿಂದೆ ಕ್ಯಾಡ್ಬರಿ ಇಂಡಿಯಾ ಲಿಮಿಟೆಡ್​ ಎಂದು ಕರೆಯಲ್ಪಡುವ ಮೊಂಡೆಲೆಜ್​ ಇಂಡಿಯಾ ಫುಡ್ಸ್​ ಪ್ರೈವೇಟ್​ ಲಿಮಿಟೆಡ್​ ಮತ್ತು ನೀರಜ್​ ಫುಡ್​ ಪ್ರಾಡಕ್ಟ್​ ನಡುವಿನ ದೀರ್ಘಾವಧಿಯ ಟ್ರೇಡ್​ಮಾರ್ಕ್​ ಉಲ್ಲಂಘನೆ ವಿವಾದ ಕುರಿತಂತೆ ದೆಹಲಿ ಹೈಕೋರ್ಟ್​ ಗುರುವಾರ ತನ್ನ ತೀರ್ಪು ನೀಡಿದೆ.

ಮೊಂಡೆಲೆಜ್​ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು, ಕ್ಯಾಡ್ಬರಿಯ ಟ್ರೇಡ್​ಮಾರ್ಕ್​ “ಜೆಮ್ಸ್​’ ನ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದ್ದಕ್ಕಾಗಿ ನೀರಜ್​ ಫುಡ್​ ಪ್ರಾಡಕ್ಸ್​ಗೆ ಸುಮಾರು 16 ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ನಿರ್ದೇಶಿಸಿದೆ.

2005ರಲ್ಲಿ ಮೊಂಡೆಲೆಜ್​ ಇಂಡಿಯಾ ಫುಡ್ಸ್​ ಪ್ರೈವೇಟ್​ ಲಿಮಿಟೆಡ್​ ಟ್ರೇಡ್​ಮಾರ್ಕ್​ ಉಲ್ಲಂಘನೆಯ ಮೊಕದ್ದಮೆ ಹೂಡಿತು. ನೀರಜ್​ ಫುಡ್​ ಪ್ರಾಡಕ್ಟ್​ ‌ʼಜೇಮ್ಸ್​ ಬಾಂಡ್​’ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಿದೆ ಎಂಬುದು ಆಕ್ಷೇಪಣೆಯ ಸಾರಾಂಶ. ಅದು ತಮ್ಮ ಅತ್ಯಂತ ಜನಪ್ರಿಯ ಮತ್ತು ಮೂಲ ಉತ್ಪನ್ನಕ್ಕೆ ಸಂರ್ಪೂಣವಾಗಿ ಹೋಲುತ್ತದೆ. ʼಜೇಮ್ಸ್​ ಬಾಂಡ್​’ ಉತ್ಪನ್ನದ ಪ್ಯಾಕೇಜಿಂಗ್​ ವಾಸ್ತವವಾಗಿ ಜೆಮ್ಸ್​ ಅನ್ನು ಹೋಲುತ್ತದೆ ಎಂದು ಗಮನಿಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್​ ಅವರು ಈ ತೀರ್ಪು ನೀಡಿದರು.

ನ್ಯಾಯಮೂರ್ತಿ ಸಿಂಗ್​ ಅವರು, ಪ್ರತಿವಾದಿಯ ಪ್ಯಾಕೇಜಿಂಗ್​ನಲ್ಲಿ ಅದೇ ನೀಲಿ, ನೇರಳೆ ಬೇಸ್​ ಮತ್ತು ಕಲರ್​ ಫುಲ್ ಬಟನ್​ ಚಾಕೊಲೇಟ್​ಗಳೊಂದಿಗೆ ಜೇಮ್ಸ್​ ಬಾಂಡ್​/ಜೇಮಿ ಬಾಂಡ್​ ಮಾರ್ಕ್​ ಬಳಸಲಾಗಿದೆ.

ಗೊಂದಲಮಯವಾಗಿ ಮತ್ತು ಮೋಸಗೊಳಿಸುವ ರೀತಿಯಲ್ಲಿ ಇದು ಹೋಲುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. ಜೊತೆಗೆ, ‘ಜೇಮ್ಸ್​ ಬಾಂಡ್​’ ಪಾತ್ರದ ಮೇಲಿನ ಕಲಾತ್ಮಕ ಕೆಲಸವು ಕ್ಯಾಡ್ಬರಿ ಅಭಿವೃದ್ಧಿಪಡಿಸಿದ ‘ಜೆಮ್ಸ್​ ಬಾಂಡ್​’ ಪಾತ್ರದಿಂದ ಪ್ರೇರಿತವಾಗಿದೆ ಎಂದು ಸಹ ನ್ಯಾಯಾಲಯ ಉಲ್ಲೇಖಿಸಿದೆ.

ನೀರಜ್​ ಫುಡ್​ ಪ್ರಾಡಕ್ಟ್​ ತಯಾರಿಸಿದ ಉತ್ಪನ್ನವನ್ನು ‘ಜೆಮ್ಸ್​’ನ “ಸಂಪೂರ್ಣ ನಕಲು ಎಂದು ಕರೆದ ನ್ಯಾಯಾಲಯ, ಕ್ಯಾಡ್​ಬರಿಗೆ 15,86,928 ರೂ. ದಂಡವನ್ನು ಪಾವತಿಸಲು ಎದುರಾಳಿ ಕಂಪನಿಗೆ ಆದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...