alex Certify ಕೋಣೆಗೆ ನುಗ್ಗಿದ ವ್ಯಕ್ತಿ ಸಂಬಂಧ ಬೆಳೆಸಿದ್ರೆ ಅವ್ರು ಮಾಡ್ತಿದ್ರು ಶೂಟಿಂಗ್…..! ನೋವು ಹಂಚಿಕೊಂಡ ಪೀಡಿತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಣೆಗೆ ನುಗ್ಗಿದ ವ್ಯಕ್ತಿ ಸಂಬಂಧ ಬೆಳೆಸಿದ್ರೆ ಅವ್ರು ಮಾಡ್ತಿದ್ರು ಶೂಟಿಂಗ್…..! ನೋವು ಹಂಚಿಕೊಂಡ ಪೀಡಿತೆ

ಅಶ್ಲೀಲ ಪ್ರಕರಣದ ಆರೋಪಿ ನಟಿ-ಮಾಡೆಲ್ ಗೆಹನಾ ವಸಿಷ್ಠ ಮತ್ತು ರೋವಾ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ ಕುಂದ್ರಾ ಪೋರ್ನೋಗ್ರಫಿ ಪ್ರಕರಣದಲ್ಲಿ ಇಬ್ಬರ ವಿಚಾರಣೆ ನಡೆಯುತ್ತಿದೆ. ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಲು ನಮ್ಮನ್ನು ಬಲವಂತ ಮಾಡಲಾಗಿತ್ತು ಎಂದು ಇಬ್ಬರು ಪೀಡಿತರು ಇವರಿಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮಡ್ ಐಲ್ಯಾಂಡ್‌ನ ಒಂದೇ ಬಂಗಲೆಯಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ಇಬ್ಬರೂ ಪೀಡಿತರು ಹೇಳಿಕೆ ನೀಡಿದ್ದಾರೆ

ಪೀಡಿತರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಇಬ್ಬರೂ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ವರದಿಯ ಪ್ರಕಾರ, ಓರ್ವ ಪೀಡಿತೆ, ರೋವಾ ಖಾನ್, ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿ, ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾಳೆ. ಇನ್ನೊಬ್ಬ ಪೀಡಿತೆ, ಗೆಹನಾ ವಸಿಷ್ಠ ವಿರುದ್ಧ ಗಂಭೀರ ಆರೋಪ  ಮಾಡಿದ್ದಾಳೆ. ಬೆದರಿಸಿ ದೈಹಿಕ ಸಂಬಂಧದ ವಿಡಿಯೋ ಮಾಡಲಾಗಿದೆ ಎಂದಿದ್ದಾಳೆ.

ಎರಡನೇ ಬಲಿಪಶುವಿನ ವಯಸ್ಸು 20 ವರ್ಷ. 2016 ರಿಂದ ಹಿಂದಿ ಮತ್ತು ಮರಾಠಿ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಅಜಿತ್ ಎಂಬ ಹುಡುಗನನ್ನು ಭೇಟಿಯಾದರು. 2021 ರ ಜನವರಿ 10 ರಂದು ಕಾಸ್ಟಿಂಗ್ ನಿರ್ದೇಶಕರಾದ ನರೇಶ್ ಮತ್ತು ಮಿತುಲ್ ಗೆ ಪೀಡಿತೆಯನ್ನು ಅಜಿತ್ ಪರಿಚಯಿಸಿದ್ದ. ಕಾನ್ಫರೆನ್ಸ್ ಕರೆಯ ಸಮಯದಲ್ಲಿ, ನರೇಶ್, ಪೀಡಿತೆಗೆ ವೆಬ್ ಸರಣಿ ಕಥೆ ಹೇಳಿದ್ದರು. ರಾಜಾ-ರಾಣಿ ಕಥೆ ಎಂದು ತಿಳಿಸಿದ್ರಂತೆ. ಮಡ್ ಐಲ್ಯಾಂಡ್‌ನಲ್ಲಿ ಸರಣಿಯ ಶೂಟಿಂಗ್ ನಡೆಯುತ್ತಿದೆ ಎಂದು ಹೇಳಿದ್ದರು. ಈ ಪಾತ್ರಕ್ಕಾಗಿ 10,000 ರೂಪಾಯಿ ನೀಡುವುದಾಗಿ ಹೇಳಿದ್ದರಂತೆ. ಮಡ್ ಐಲ್ಯಾಂಡ್ ಗೆ ಹೋದ್ಮೇಲೆ ಈ ವೆಬ್ ಸರಣಿಯ ನಿರ್ಮಾಪಕರಾಗಿದ್ದ ವಸಿಷ್ಠ, ಬಟ್ಟೆ ನೀಡಿದ್ದರು. ಅದನ್ನು ಧರಿಸಿ ಗ್ರೀನ್ ಪಾರ್ಕ್ ಬಂಗಲೆ ಹೊರಗೆ ಹೋಗಿದ್ದೆ ಎಂದು ಆಕೆ ಹೇಳಿದ್ದಾಳೆ.

ನಂತ್ರ ಮತ್ತೊಂದು ಬಟ್ಟೆ ನೀಡಿದ ವಸಿಷ್ಠ, ಸಹಕರಿಸುವಂತೆ ಧಮಕಿ ಹಾಕಿದ್ದರಂತೆ. 10 ಲಕ್ಷ ಖರ್ಚಾಗಿದೆ. ಶೂಟಿಂಗ್ ಮಾಡದೆ ಹೋದಲ್ಲಿ 10 ಲಕ್ಷ ನೀನು ನೀಡಬೇಕು ಎಂದಿದ್ದರಂತೆ. ಅಷ್ಟರಲ್ಲಿ ಕೋಣೆಗೆ ನುಗ್ಗಿದ ಆಕಾಶ್ ಎಂಬಾತ, ಶಾರೀರಿಕ ಸಂಬಂಧ ಬೆಳೆಸಿದ್ದನಂತೆ. ಇದ್ರ ನಂತ್ರವೂ ಪೀಡಿತೆಗೆ ಅಲ್ಲಿಂದ ಹೋಗಲು ಬಿಡದ ವಸಿಷ್ಠ, ಪೊಲೀಸರಿಗೆ ತಿಳಿಸಿದ್ರೆ ಪರಿಣಾಮ ನೆಟ್ಟಗಿರಲ್ಲವೆಂದು ಧಮಕಿ ಹಾಕಿದ್ದಳಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...