ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ತಮ್ಮ ಮಗನ ಹೆಸರನ್ನ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತಮ್ಮ ಪುತ್ರಿ ಹಿನಾಯಾ ಹೀರ್ ಪ್ಲಾಹಾ ಜೊತೆಗೆ ಪುತ್ರನ ಫೋಟೋವನ್ನ ಶೇರ್ ಮಾಡಿರುವ ನಟಿ ಗೀತಾ ತಮ್ಮ ಪುತ್ರನಿಗೆ ಜೋವನ್ ಸಿಂಗ್ ಪ್ಲಾಹಾ ಎಂದು ನಾಮಕಾರಣ ಮಾಡಿರೋದಾಗಿ ಹೇಳಿದ್ದಾರೆ. ಜುಲೈ 10ರಂದು ಗೀತಾ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಜೋವನ್ ಸ್ಲಾವಿಕ್ ಭಾಷೆಯ ಮೂಲವನ್ನ ಹೊಂದಿದ್ದು ಇದರ ಅರ್ಥ ದೇವರ ಕೃಪೆ ಎಂದಾಗಿದೆ. ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿರುವ ಫೋಟೋದಲ್ಲಿ ಹಿನಾಯಾ ತನ್ನ ಮಡಿಲಿನಲ್ಲಿ ತಮ್ಮನನ್ನ ಎತ್ತಿಕೊಂಡು ಹಣೆಗೆ ಮುತ್ತಿಕ್ಕುತ್ತಿದ್ದಾಳೆ.
ಈ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ನಟಿ, ಜೋವಾನ್ ವೀರ್ ಸಿಂಗ್ ಪ್ಲಾಹಾರನ್ನ ಪರಿಚಯಿಸುತ್ತಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಗೀತಾ ಹಾಗೂ ಹರ್ಭಜನ್ ಸಿಂಗ್ 2015ರ ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲ ಪುತ್ರಿ ಹಿನಾಯಾ ಜುಲೈ 2016ರ ಜುಲೈನಲ್ಲಿ ಜನಿಸಿದ್ದಳು.
https://www.instagram.com/p/CRx8mwxsfpf/?utm_source=ig_web_copy_link