ಗುಜರಾತ್‌ನ ಖೇಡಾ ಜಿಲ್ಲೆಯ ಮಟರ್ ತಾಲೂಕಿನಲ್ಲಿರುವ ಅನಿಲ ಘಟಕವೊಂದರಲ್ಲಿ ಕ್ಲೋರಿನ್ ಸೋರಿಕೆಯುಂಟಾದ ಕಾರಣ ಮಕ್ಕಳೂ ಸೇರಿದಂತೆ 15 ಮಂದಿ ಅಸ್ವಸ್ಥರಾಗಿದ್ದಾರೆ.
ಘಟನೆಯಲ್ಲಿ ಏಳು ಮಹಿಳೆಯರು, ಮೂವರು ಮಕ್ಕಳು ಮತ್ತು ಐದು ಪುರುಷರು ಅಸ್ವಸ್ಥರಾಗಿದ್ದರು. ಅನಿಲ ಘಟಕದ ಬಳಿ ವಾಸಿಸುತ್ತಿದ್ದವರೇ ಕ್ಲೋರಿನ್ ಸೋರಿಕೆಯಿಂದ ಅಸ್ವಸ್ಥರಾಗಿದ್ದು ಅವರನ್ನೆಲ್ಲಾ ಹತ್ತಿರದ ತಾರಾಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲ ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾರೆ.
ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ ಪಡೆದ ಫೋಟೋ..! ಆ ಚಿತ್ರ ನೋಡಿದ್ರೆ ಖಂಡಿತಾ ಅಚ್ಚರಿಪಡ್ತೀರಾ.. !
ತಕ್ಷಣವೇ ಸೋರಿಕೆ ಸ್ಥಳಕ್ಕೆ ಆಗಮಿಸಿದ ನದಿಯಾಡ್ ಪಟ್ಟಣದ ಅಗ್ನಿಶಾಮಕ ದಳದ ಸಿಬ್ಬಂದಿ ಸೋರಿಕೆಯಾದ ಸಿಲಿಂಡರ್‌ಗಳ ಮೇಲೆ ನೀರು ಚಿಮ್ಮಿಸುವ ಮೂಲಕ ಸೋರಿಕೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಇಲ್ಲಿನ ಖೇಡಾ-ತಾರಾಪುರ ಹೆದ್ದಾರಿಯಲ್ಲಿ, ಪಾಯ್ರೇಜ್ ಗ್ರಾಮದ ಹೊರವಲದಲ್ಲಿರುವ ನೀರು ಸರಬರಾಜು ಇಲಾಖೆಯ 16 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕದಲ್ಲಿ ಸೋರಿಕೆಯ ಅನಾಹುತ ಸಂಭವಿಸಿದೆ.