alex Certify ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ ಪಡೆದ ಫೋಟೋ..! ಆ ಚಿತ್ರ ನೋಡಿದ್ರೆ ಖಂಡಿತಾ ಅಚ್ಚರಿಪಡ್ತೀರಾ.. ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ ಪಡೆದ ಫೋಟೋ..! ಆ ಚಿತ್ರ ನೋಡಿದ್ರೆ ಖಂಡಿತಾ ಅಚ್ಚರಿಪಡ್ತೀರಾ.. !

ಪ್ರಪಂಚದಾದ್ಯಂತ ಬಹುತೇಕ ಮಂದಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುತ್ತಾರೆ, ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮಗಳಿವೆ. ಇಲ್ಲಿ ಬಹುತೇಕರು ತಮ್ಮ, ಕುಟುಂಬದ, ಸ್ನೇಹಿತರ ಜೊತೆಗಿರುವ ಚಿತ್ರಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಅಲ್ಲದೆ ತಾವು ಮಾಡಿದ ಪೋಸ್ಟ್ ಗೆ ಎಷ್ಟು ಲೈಕ್ಸ್ ಬಂದಿದೆ ಅಂತಾನೂ ಚೆಕ್ ಮಾಡುತ್ತಾರೆ.

ಇನ್ನು, ಸೆಲೆಬ್ರಿಟಿಗಳಿಗಂತೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಇರೋದ್ರಿಂದ ಲಕ್ಷಾಂತರ ಲೈಕ್ಸ್ ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಇನ್ಸ್ಟಾಗ್ರಾಂನಲ್ಲಿ ಈವರೆಗೆ ಅತಿ ಹೆಚ್ಚು ಲೈಕ್ ಪಡೆದ ಫೋಟೋ ಯಾವುದಿರಬಹುದು ಯೋಚಿಸಿ ನೋಡೋಣ….. ಬಾಲಿವುಡ್ ಕಲಾವಿದರೋ, ಹಾಲಿವುಡ್ ಕಲಾವಿದರೋ ಇರಬಹುದು ಅಂತಾ ಅನ್ಕೊಂಡಿದ್ರೆ ಖಂಡಿತಾ ನಿಮ್ಮ ಊಹೆ ತಪ್ಪು. ಯಾಕಂದ್ರೆ, ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ ಪಡೆದ ಫೋಟೋ ಅಂದ್ರೆ ಅದು ಒಂದು ಮೊಟ್ಟೆಯ ಚಿತ್ರ..!

ಈ ಸುದ್ದಿ ಕೇಳಿ ನಿಮಗೆ ಅಚ್ಚರಿಯಾದ್ರೂ ಇದು ನಿಜ….. ಮೂರು ವರ್ಷಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿರೋ ಮೊಟ್ಟೆಯ ಫೋಟೋವೊಂದು ಇಲ್ಲಿಯವರೆಗೆ ಅತೀ ಹೆಚ್ಚು ಲೈಕ್ಸ್​ ಪಡೆದ ಫೋಟೋವಾಗಿದೆ. ಈ ಬಗ್ಗೆ ಸ್ವತಃ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಮಾಹಿತಿ ನೀಡಿದೆ. ಈ ಕೋಳಿ ಮೊಟ್ಟೆಯ ಫೋಟೋಗೆ ಬರೋಬ್ಬರಿ 55.5 ಮಿಲಿಯನ್​ ಲೈಕ್​ಗಳು ಹಾಗೂ 3.4 ಮಿಲಿಯನ್​ ಕಮೆಂಟ್​ಗಳು ಬಂದಿವೆ.

ವಿಶ್ವ ದಾಖಲೆ ನಿರ್ಮಿಸಿರುವ ಈ ಮೊಟ್ಟೆಯ ಫೋಟೋವನ್ನು ಮೂರು ವರ್ಷಗಳ ಹಿಂದೆ ಪೋಸ್ಟ್​ ಮಾಡಲಾಗಿದೆ. 55.5 ಮಿಲಿಯನ್​ ಲೈಕ್​ಗಳನ್ನು ಸಂಪಾದಿಸುವ ಮೂಲಕ ಇನ್​ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ಸ್​ ಪಡೆದ ಫೋಟೋ ಎನಿಸಿಕೊಂಡಿದೆ. ಆದರೆ, ಇದರಲ್ಲಿ ಇನ್ನೊಂದು ಕುತೂಹಲಕಾರಿ ಅಂಶವೇನೆಂದರೆ, ಈ ಮೊಟ್ಟೆಯ ಫೋಟೋವನ್ನು ಹೊಂದಿರುವ ಇನ್​ಸ್ಟಾಗ್ರಾಂ ಖಾತೆಯು ಕೇವಲ ಒಂದೇ ಒಂದು ಪೋಸ್ಟ್​ನ್ನು ಹೊಂದಿದೆ. ಅದು ಈ ಮೊಟ್ಟೆಯ ಫೋಟೋ ಮಾತ್ರ..! ಈ ಇನ್​ಸ್ಟಾಗ್ರಾಂ ಖಾತೆಯು ಬರೋಬ್ಬರಿ 4.8 ಮಿಲಿಯನ್​ ಫಾಲೋವರ್ಸ್ ಹೊಂದಿದೆ.

ಈ ಇನ್ಸ್ಟಾಗ್ರಾಂ ಖಾತೆಯನ್ನು ವಿಶ್ವದಾಖಲೆ ನಿರ್ಮಿಸಲೆಂದೇ ತಯಾರಿಸಲಾಗಿದೆ. ಮೊಟ್ಟೆಯ ಫೋಟೋವನ್ನು 2019ರ ಜನವರಿ 4ರಂದು ಪೋಸ್ಟ್​ ಮಾಡಲಾಗಿದೆ. ಈ ಫೋಟೋಗೆ ಎಲ್ಲರೂ ಸೇರಿ ವಿಶ್ವದಾಖಲೆ ನಿರ್ಮಿಸೋಣ ಮತ್ತು ಇದನ್ನು ಇನ್​ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ಸ್​ ಪಡೆದ ಪೋಸ್ಟ್​ ಆಗಿ ದಾಖಲೆ ಮಾಡುವ ಎಂದು ಶೀರ್ಷಿಕೆ ನೀಡಲಾಗಿದೆ.

2018ರ ಫೆಬ್ರವರಿ ತಿಂಗಳಲ್ಲಿ ಕೈಲಿ ಜೆನ್ನರ್​ ತನ್ನ ನವಜಾತ ಶಿಶುವಿನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. ಇದಕ್ಕೆ ಅತೀ ಹೆಚ್ಚು ಅಂದರೆ 18 ಮಿಲಿಯನ್ ಲೈಕ್​ಗಳು ಬಂದಿದ್ದವು. ಈ ದಾಖಲೆಯನ್ನು ಮೊಟ್ಟೆಯ ಫೋಟೋ ಮುರಿದಿದ್ದು, ಇನ್ಯಾರೂ ಮುರಿಯೋಕೆ ಸಾಧ್ಯವಾಗಿಲ್ಲ.

— Guinness World Records (@GWR) January 4, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...