alex Certify ಇಲ್ಲಿದೆ ʼಗಂಗಾ ಎಕ್ಸ್‌ಪ್ರೆಸ್‌ ವೇʼ ಕುರಿತ ಆಸಕ್ತಿಕರ ಅಂಶಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಗಂಗಾ ಎಕ್ಸ್‌ಪ್ರೆಸ್‌ ವೇʼ ಕುರಿತ ಆಸಕ್ತಿಕರ ಅಂಶಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಲೇ ಈ ಹೆದ್ದಾರಿ ಉತ್ತರ ಪ್ರದೇಶದ ಅತ್ಯಂತ ಉದ್ದವಾದ ಹೆದ್ದಾರಿಯಾಗಲಿದ್ದು, ರಾಜ್ಯದ ಪೂರ್ವ ಮತ್ತು ಪಶ್ಚಿಮಗಳನ್ನು ಸಂಪರ್ಕಿಸುತ್ತದೆ.

ತೂಕ ಇಳಿಸಲು ಮನೆಯಲ್ಲೇ ಮಾಡಿ ಈ ಸೂಪ್

ಗಂಗಾ ಎಕ್ಸ್‌ಪ್ರೆಸ್‌ ವೇಯ ಆಸಕ್ತಿಕರ ವಿಷಯಗಳು

* ಗಂಗಾ ಎಕ್ಸ್‌ಪ್ರೆಸ್‌ ವೇ 594 ಕಿಮೀ ಉದ್ದವಿದ್ದು ಆರು ಪಥಗಳನ್ನು ಹೊಂದಲಿದೆ.

* ಹೆದ್ದಾರಿಯನ್ನು 36,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

* ಮೀರತ್‌ ಬಳಿಯ ಬಿಜೌಲಿ ಗ್ರಾಮದಲ್ಲಿ ಆರಂಭಗೊಳ್ಳುವ ಗಂಗಾ ಎಕ್ಸ್‌ಪ್ರೆಸ್‌ವೇ ಪ್ರಯಾಗ್‌ರಾಜ್ ಬಳಿಯ ಜುದಾಪುರದಲ್ಲಿ ಅಂತ್ಯಗೊಳ್ಳಲಿದೆ.

* ಉತ್ತರ ಪ್ರದೇಶದ 12 ಜಿಲ್ಲೆಗಳನ್ನು ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದೆ.

* ಮೀರತ್‌, ಹಾಫುರ, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬಡೌನ್, ಶಹಜಹಾನ್ಪುರ, ಹರ್ದೋಯ್‌, ಉನ್ನಾವೋ, ರಾಯ್ ಬರೇಯ್ಲಿ, ಪ್ರತಾಪ್‌ಘಡ ಮತ್ತು ಪ್ರಯಾಗ್‌ರಾಜ್ ಮೂಲಕ ಈ ಹೆದ್ದಾರಿ ಹಾಯ್ದು ಹೋಗಲಿದೆ.

* ವಾಯುಪಡೆಯ ವಿಮಾನಗಳಿಗೆ ತುರ್ತು ಭೂಸ್ಪರ್ಶ ಹಾಗೂ ಟೇಕಾಫ್‌ಗಳಿಗೆ ನೆರವಾಗಲು 3.5 ಕಿಮೀ ಉದ್ದದ ಏರ್‌ಸ್ಟ್ರಿಪ್‌ ಅನ್ನು ಈ ಎಕ್ಸ್‌ಪ್ರೆಸ್‌ವೇ ಒಳಗೊಂಡಿದೆ.

* ಗಂಗಾ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಪ್ರಸ್ತಾಪ ಇಡಲಾಗಿದೆ.

* ಕೈಗಾರಿಕಾಭಿವೃದ್ಧಿ, ವಾಣಿಜ್ಯ, ಕೃಷಿ, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಈ ಎಕ್ಸ್‌ಪ್ರೆಸ್‌ವೇಯಿಂದ ದೊಡ್ಡ ಅನುಕೂಲವಾಗಲಿದ್ದು, ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಶಕ್ತಿ ಸಿಗಲಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...