ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಗಂಗಾ ಎಕ್ಸ್ಪ್ರೆಸ್ವೇ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಲೇ ಈ ಹೆದ್ದಾರಿ ಉತ್ತರ ಪ್ರದೇಶದ ಅತ್ಯಂತ ಉದ್ದವಾದ ಹೆದ್ದಾರಿಯಾಗಲಿದ್ದು, ರಾಜ್ಯದ ಪೂರ್ವ ಮತ್ತು ಪಶ್ಚಿಮಗಳನ್ನು ಸಂಪರ್ಕಿಸುತ್ತದೆ.
ತೂಕ ಇಳಿಸಲು ಮನೆಯಲ್ಲೇ ಮಾಡಿ ಈ ಸೂಪ್
ಗಂಗಾ ಎಕ್ಸ್ಪ್ರೆಸ್ ವೇಯ ಆಸಕ್ತಿಕರ ವಿಷಯಗಳು
* ಗಂಗಾ ಎಕ್ಸ್ಪ್ರೆಸ್ ವೇ 594 ಕಿಮೀ ಉದ್ದವಿದ್ದು ಆರು ಪಥಗಳನ್ನು ಹೊಂದಲಿದೆ.
* ಹೆದ್ದಾರಿಯನ್ನು 36,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
* ಮೀರತ್ ಬಳಿಯ ಬಿಜೌಲಿ ಗ್ರಾಮದಲ್ಲಿ ಆರಂಭಗೊಳ್ಳುವ ಗಂಗಾ ಎಕ್ಸ್ಪ್ರೆಸ್ವೇ ಪ್ರಯಾಗ್ರಾಜ್ ಬಳಿಯ ಜುದಾಪುರದಲ್ಲಿ ಅಂತ್ಯಗೊಳ್ಳಲಿದೆ.
* ಉತ್ತರ ಪ್ರದೇಶದ 12 ಜಿಲ್ಲೆಗಳನ್ನು ಎಕ್ಸ್ಪ್ರೆಸ್ವೇ ಹಾದು ಹೋಗಲಿದೆ.
* ಮೀರತ್, ಹಾಫುರ, ಬುಲಂದ್ಶಹರ್, ಅಮ್ರೋಹಾ, ಸಂಭಾಲ್, ಬಡೌನ್, ಶಹಜಹಾನ್ಪುರ, ಹರ್ದೋಯ್, ಉನ್ನಾವೋ, ರಾಯ್ ಬರೇಯ್ಲಿ, ಪ್ರತಾಪ್ಘಡ ಮತ್ತು ಪ್ರಯಾಗ್ರಾಜ್ ಮೂಲಕ ಈ ಹೆದ್ದಾರಿ ಹಾಯ್ದು ಹೋಗಲಿದೆ.
* ವಾಯುಪಡೆಯ ವಿಮಾನಗಳಿಗೆ ತುರ್ತು ಭೂಸ್ಪರ್ಶ ಹಾಗೂ ಟೇಕಾಫ್ಗಳಿಗೆ ನೆರವಾಗಲು 3.5 ಕಿಮೀ ಉದ್ದದ ಏರ್ಸ್ಟ್ರಿಪ್ ಅನ್ನು ಈ ಎಕ್ಸ್ಪ್ರೆಸ್ವೇ ಒಳಗೊಂಡಿದೆ.
* ಗಂಗಾ ಎಕ್ಸ್ಪ್ರೆಸ್ವೇ ಉದ್ದಕ್ಕೂ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಪ್ರಸ್ತಾಪ ಇಡಲಾಗಿದೆ.
* ಕೈಗಾರಿಕಾಭಿವೃದ್ಧಿ, ವಾಣಿಜ್ಯ, ಕೃಷಿ, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಈ ಎಕ್ಸ್ಪ್ರೆಸ್ವೇಯಿಂದ ದೊಡ್ಡ ಅನುಕೂಲವಾಗಲಿದ್ದು, ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಶಕ್ತಿ ಸಿಗಲಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.