alex Certify ಈ ಬಾರಿ ವಿಘ್ನ ವಿನಾಶಕ ಗಣಪತಿ ಪೂಜೆಗೆ ಯಾವುದು ಶುಭ ಮುಹೂರ್ತ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಾರಿ ವಿಘ್ನ ವಿನಾಶಕ ಗಣಪತಿ ಪೂಜೆಗೆ ಯಾವುದು ಶುಭ ಮುಹೂರ್ತ…?

Ganesh Chaturthi 2021: Date, Shubh Muhurat, Puja Vidhi and Significance | The Indian Nation

2021ರ ಈ ವರ್ಷ ಗಣೇಶ ಚತುರ್ಥಿಯು ಸೆ. 10 ರಂದು ಬಂದಿದೆ. ಹಿಂದೂ ಪಂಚಾಂಗವನ್ನು ಆಧರಿಸಿ ಹಬ್ಬದ ದಿನವನ್ನು ನಿಗದಿಪಡಿಸಲಾಗಿದೆ. 11 ದಿನಗಳವರೆಗೆ ಗಣಪತಿಯನ್ನು ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ.

ಅದರಂತೆ ಸೆ. 21ರವರೆಗೆ ಗಣೇಶ ಮೂರ್ತಿಗಳು ವಿವಿಧ ದೇವಸ್ಥಾನ, ಪೆಂಡಾಲ್‍ಗಳಲ್ಲಿ ರಾರಾಜಿಸಲಿವೆ. ನಂತರ ಅನಂತ ಚತುರ್ದಶಿಯಂದು ವಿಸರ್ಜನೆ ನಡೆಯಲಿದೆ. ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಉತ್ತರಪ್ರದೇಶಗಳಲ್ಲಿ ಗಣಪತಿ ಹಬ್ಬಕ್ಕೆ ಭಾರಿ ವೈಶಿಷ್ಟ್ಯತೆ ಇದೆ.

ಸೆ. 10ರ ನಸುಕಿನ 12.17 ರಿಂದ ರಾತ್ರಿ 10 ಗಂಟೆಯವರೆಗೆ ಚತುರ್ಥಿ ಅಥವಾ ಚೌತಿ ತಿಥಿ ಇದೆ. ಬೇಗನೇ ಎದ್ದು ನಿತ್ಯದ ಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ, ಹೊಸಬಟ್ಟೆಯ ಜತೆಗೆ ಕುಂಕುಮ ಧರಿಸಿಕೊಂಡು ಗಣಪತಿಯ ಪೂಜೆಗೆ ಮುಂದಾಗಬೇಕು. ಗರಿಕೆ ಹುಲ್ಲು ಅಥವಾ ದೂರ್ವೆ ಗಣಪತಿಗೆ ಬಹಳ ಪ್ರೀತಿ. ಹಾಗಾಗಿ ಸಾಧ್ಯವಾದಷ್ಟು ಗರಿಕೆಯನ್ನು ಕಿತ್ತುಕೊಂಡು ಗಣಪನಿಗೆ ಅರ್ಪಿಸಿ, ನಿಮ್ಮ ಕಾಮನೆಗಳನ್ನು ಈಡೇರಿಸುವಂತೆ ಬೇಡಿಕೊಳ್ಳಿರಿ.

GOOD NEWS: ‘ನಿಫಾ’ ನಿಯಂತ್ರಣಕ್ಕೂ ಬರಲಿದೆ ‘ಕೋವಿಶೀಲ್ಡ್’ ಮಾದರಿ ಲಸಿಕೆ

ಇನ್ನು ನೈವೇದ್ಯಕ್ಕಾಗಿ ಮೋದಕ ಮಾಡಿದ್ದರೆ, ಅದು ಬಹಳ ಶ್ರೇಷ್ಟ. ಗಣಪನಿಗೆ ಬಲುಪ್ರಿಯವಾದದ್ದು. ಮನೆಯವರೆಲ್ಲ ಸೇರಿಕೊಂಡು ಗಣಪನಿಗೆ ಅಲಂಕಾರ ಮಾಡಿ, ನೈವೇದ್ಯ ಅರ್ಪಿಸಿದ ಬಳಿಕ ಆರತಿ ಬೆಳಗಿದರೆ, ಗಣಪ ಪ್ರಸನ್ನನಾಗುತ್ತಾನೆ ಎಂದು ಹಿರಿಯರು ಹೇಳುತ್ತಾರೆ.

ಯಾವುದೇ ವಿಘ್ನಗಳು ಬಾಧಿಸದಂತೆ ಹೊಸ ಕೆಲಸ ಕಾರ್ಯಗಳನ್ನು ಕೂಡ ಗಣೇಶ ಚತುರ್ಥಿಯಂದು ಆರಂಭಿಸಬಹುದು. ಗಣಪನಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರಯತ್ನ ಪಟ್ಟರೆ ಖಂಡಿತ ಯಶಸ್ಸು ಸಿಗುತ್ತದೆ. ಮಕ್ಕಳು ವಿದ್ಯಾಭ್ಯಾಸ ಚೆನ್ನಾಗಿ ಆಗಲೆಂದು ಗಣಪನಿಗೆ 21 ಗರಿಕೆ ಹುಲ್ಲು ಏರಿಸುವುದು ನೂರಾರು ವರ್ಷಗಳಿಂದ ನಡೆದು ಬಂದಿರುವ ಫಲಪ್ರದವಾದ ಪದ್ಧತಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...