alex Certify ಶಾಕಿಂಗ್: ತಡರಾತ್ರಿ ವಿಧವೆ ಮೇಲೆರಗಿದ ಮಲಮಗನಿಂದಲೇ ನೀಚ ಕೃತ್ಯ –ಮರ್ಯಾದೆಗೆ ಅಂಜಿದ ಸಂಬಂಧಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ತಡರಾತ್ರಿ ವಿಧವೆ ಮೇಲೆರಗಿದ ಮಲಮಗನಿಂದಲೇ ನೀಚ ಕೃತ್ಯ –ಮರ್ಯಾದೆಗೆ ಅಂಜಿದ ಸಂಬಂಧಿಕರು

ಭೋಪಾಲ್: ಲೈಂಗಿಕ ದೌರ್ಜನ್ಯದ ಮತ್ತೊಂದು ಅವಮಾನಕರ ಘಟನೆಯಲ್ಲಿ 24 ವರ್ಷದ ವಿಧವೆ ಮೇಲೆ ಆಕೆಯ ಗಂಡನ ಮೊದಲ ಪತ್ನಿಯ ಪುತ್ರ ಅತ್ಯಾಚಾರ ಎಸಗಿದ್ದಾನೆ.

ಆಘಾತಕಾರಿ ಸಂಗತಿಯೆಂದರೆ ಮಹಿಳೆಯ ಸಂಬಂಧಿಕರು ಈ ವಿಚಾರ ತಿಳಿದ ನಂತರ ಮರ್ಯಾದೆಗೆ ಅಂಜಿ ಪೊಲೀಸರಿಗೆ ಮಾಹಿತಿ ನೀಡುವುದನ್ನು ತಡೆದಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮಹಿಳೆ ಧೈರ್ಯ ತೋರಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಧ್ಯಪ್ರದೇಶದ ಭೋಪಾಲ್ ನ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಆರೋಪಿಯ ತಾಯಿ ತೀರಿದ ನಂತರ ಆತನ ತಂದೆ ಸಂತ್ರಸ್ತೆಯನ್ನು ಮದುವೆಯಾಗಿದ್ದು, ಎರಡನೇ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. 3 ವರ್ಷಗಳ ಹಿಂದೆ ಆರೋಪಿ ತಂದೆಯೂ ತೀರಿಕೊಂಡಿದ್ದು, ಒಂದೇ ಮನೆಯಲ್ಲಿ ಮಲತಾಯಿ ಮತ್ತು ಆಕೆಯ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ.

ಶುಕ್ರವಾರ ರಾತ್ರಿ ಮಲತಾಯಿ ಮಲಗಿದ್ದ ರೂಮ್ ಗೆ ಬಂದ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದಾನೆ. ಮಹಿಳೆ ತನ್ನ ಸಂಬಂಧಿಕರಿಗೆ ವಿಚಾರ ಹೇಳಿದಾಗ ಮರ್ಯಾದೆಗೆ ಅಂಜಿ ದೂರು ನೀಡದಂತೆ ತಡೆದಿದ್ದಾರೆ. ಆದರೆ, ಇದನ್ನು ಒಪ್ಪದ ಮಹಿಳೆ ಜೀವನದುದ್ದಕ್ಕೂ ಕಳಂಕ ಕಾಡುತ್ತದೆ ಎಂದು ಭಾವಿಸಿ ಧೈರ್ಯ ತೋರಿ ಗೋವಿಂದಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಕಾನೂನು ಸಂಬಂಧಿತ ವಿಭಾಗಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...