ಇನ್ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದ 22 ವರ್ಷದ ಗ್ಯಾಬಿ ಪೆಟಿಟೊ ಎಂಬ ಯುವತಿ ಕಾಣೆಯಾಗಿದ್ದಾಳೆ ಎಂದು ಹೇಳಲಾಗಿದ್ದು, ಯುಎಸ್ ಪೊಲೀಸರು ಆಕೆಗಾಗಿ ಹುಡುಕಾಟ ಶುರು ಮಾಡಿದ್ದಾರೆ.
ಪೆಟಿಟೊ ತನ್ನ ಮದುವೆಯಾಗಲಿದ್ದ ಹುಡುಗ ಬ್ರಿಯಾನ್ ಲಾಂಡ್ರಿ ಜೊತೆ ಪ್ರವಾಸಕ್ಕೆ ತೆರಳಿದ್ದಳು. ಆದರೆ, ಸೆಪ್ಟೆಂಬರ್ 1ರಂದು ಪ್ರವಾಸದಿಂದ ಲಾಂಡ್ರಿ ಒಬ್ಬನೇ ವಾಪಸ್ ಬಂದಿದ್ದಾನೆ. ಹೀಗಾಗಿ ಪೆಟಿಟೊ ಪೋಷಕರು ಪೊಲೀಸರಿಗೆ ಕಾಣೆಯಾಗಿರುವ ದೂರು ನೀಡಿದ್ದಾರೆ.
ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದಿಂದ ಗ್ರಾನೈಟ್..!
ಪೆಟಿಟೊ ಈ ವರ್ಷದ ಜೂನ್ ನಲ್ಲಿ ಲಾಂಡ್ರಿಯೊಂದಿಗೆ ಪ್ರವಾಸ ಶುರು ಮಾಡಿದ್ದಳು. ಮಾಧ್ಯಮ ವರದಿಗಳ ಪ್ರಕಾರ, ಅವರು ಯುಎಸ್ ಪಶ್ಚಿಮ ಕರಾವಳಿಯ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಲು ಯೋಜಿಸಿದ್ದರು.
ಪೆಟಿಟೊ ತನ್ನ ರಸ್ತೆ ಪ್ರವಾಸದಲ್ಲಿ ತನ್ನ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಳು. ಆದರೆ, ಆಕೆಯ ಕುಟುಂಬ ಆಗಸ್ಟ್ ಕೊನೆಯ ವಾರದಲ್ಲಿ ಅವಳ ಸಂಪರ್ಕವನ್ನು ಕಳೆದುಕೊಂಡಿತು.
ಇನ್ನು ಬ್ರಿಯಾನ್ ಲಾಂಡ್ರಿ ಕೂಡ ಪೊಲೀಸ್ ಅಧಿಕಾರಿಗಳ ಜೊತೆ ಮಾತಕತೆಗೆ ಸಹಕರಿಸುತ್ತಿಲ್ಲ ಎಂದು ಹೇಳಲಾಗಿದೆ.