ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇಂದು ಮತ್ತೊಂದು ಶಾಕ್. ಈಗಾಗಲೇ ಗಗನಮುಖಿಯಾಗಿರುವ ಪೆಟ್ರೋಲ್ – ಡಿಸೇಲ್ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದ್ದು, ಇದರಿಂದ ದಿನಬಳಕೆ ವಸ್ತುಗಳ ಬೆಲೆ ಮತ್ತೊಮ್ಮೆ ಮುಗಿಲು ಮುಟ್ಟಲಿದೆ.
ಇಂದು ಪೆಟ್ರೋಲ್ – ಡಿಸೇಲ್ ಬೆಲೆಯಲ್ಲಿ 35 ಪೈಸೆಗಳಷ್ಟು ಏರಿಕೆಯಾಗಿದ್ದು, ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 87.30 ರೂ. ತಲುಪಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 93.83 ರೂಪಾಯಿಗಳಾಗಿದೆ.
ಇನ್ನು ದೆಹಲಿಯಲ್ಲಿ ಲೀಟರ್ ಡಿಸೇಲ್ ಬೆಲೆ 77.48 ರೂಪಾಯಿಗಳಾಗಿದ್ದು, ಮುಂಬೈನಲ್ಲಿ ಲೀಟರ್ ಡಿಸೇಲ್ ಬೆಲೆ 84.36 ರೂಪಾಯಿಗಳಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 89.83 ರೂ. ಹಾಗೂ ಲೀಟರ್ ಡಿಸೇಲ್ ಬೆಲೆ 82.79 ರೂಪಾಯಿಗಳಾಗಿದೆ.