ಕೋವಿಡ್-19 ಸಾಂಕ್ರಮಿಕದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿರುವುದು ಭಾರೀ ಆತಂಕದ ವಿಚಾರವಾಗಿದೆ. ಬ್ರೆಂಟ್ ಬೆಲೆಗಳಲ್ಲಿ ಏರಿಕೆಯಾಗುವುದರೊಂದಿಗೆ ಇಂಧನದ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ವಿವಿಧ ರೀತಿಯ ತೆರಿಗೆಗಳು ಸೇರಿಕೊಂಡು ಜನಸಾಮಾನ್ಯರನ್ನು ಹಣ್ಣಾಗಿಸಿಬಿಟ್ಟಿವೆ.
ದೇಶದ ವಾಣಿಜ್ಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 105 ರೂ./ಲೀ ಮಟ್ಟ ತಲುಪಿದ್ದು, ಗ್ಯಾಸೋಲಿನ್ ಹಾಗೂ ಡೀಸೆಲ್ ಬೆಲೆಗಳು ದಾಖಲೆ ಏರಿಕೆ ಕಂಡಿರುವ ಕಾರಣ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಭಾಯಿಸಲು ಹೈರಾಣಾಗಿಬಿಟ್ಟಿದ್ದಾರೆ.
ಗಮನಿಸಿ: ಇನ್ನೆರಡು ದಿನಗಳಲ್ಲಿ ಬದಲಾಗಲಿದೆ ಬ್ಯಾಂಕ್ ಗೆ ಸಂಬಂಧಿಸಿದ ಈ ನಿಯಮ
ಮುಂಬಯಿಯಂಥ ನಗರಗಳಲ್ಲಿ ಗ್ಯಾಸೋಲಿನ್ ಬೆಲೆಯು ನ್ಯೂಯಾರ್ಕ್‌ನಲ್ಲಿ ಇರುವ ಬೆಲೆಯ ದುಪ್ಪಟ್ಟಿಗಿಂತ ಅಧಿಕವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಗ್ಯಾಸೋಲಿನ್ ಬೆಲೆಯಲ್ಲಿ 25% ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪ್‌ನಿಂದ ತಿಳಿದುಬಂದಿದೆ. ಇದರೊಂದಿಗೆ ಹಣದುಬ್ಬರದ ಹೊಡೆತವೂ ಸೇರಿಕೊಂಡಿದೆ.
8ನೇ ಕ್ಲಾಸ್ ವಿದ್ಯಾರ್ಥಿನಿಗೆ ಲವ್ ಲೆಟರ್ ಬರೆದು ಸಿಕ್ಕಿಬಿದ್ದ ಶಿಕ್ಷಕನ ತಲೆ ಬೋಳಿಸಿ ಮೆರವಣಿಗೆ
ಇದೇ ವೇಳೆ ಏರುತ್ತಿರುವ ಇಂಧನ ಬೆಲೆಗಳಿಂದ ಟ್ರಕ್ ಚಾಲಕರಿಗೆ ಭಾರೀ ಹೊಡೆತ ಬಿದ್ದಿದೆ. ಇಂಧನದ ಬೆಲೆಯೇ ಟ್ರಕ್ ನಿರ್ವಹಣೆಯ 70%ರಷ್ಟಾಗುವಾಗ ಈ ರೀತಿ ಬೆಲೆ ಏರಿಕೆಯಿಂದ ದೇಶದ 1.5 ಕೋಟಿಯಷ್ಟು ಲಾರಿ ಚಾಲಕರ ಜೊತೆಗೆ ಬಸ್ ಹಾಗೂ ಪ್ರವಾಸೀ ವಾಹನಗಳ ಮಾಲೀಕರು ಭಾರೀ ಚಿಂತಿತರಾಗಿದ್ದಾರೆ.