alex Certify ಸಿಂಹದ ಸಮೀಪ ತೆರಳಿದ್ದ ಭೂಪ ಕೂದಲೆಳೆ ಅಂತರದಲ್ಲಿ ಪಾರು: ಮೈ ಝುಂ ಎನ್ನಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹದ ಸಮೀಪ ತೆರಳಿದ್ದ ಭೂಪ ಕೂದಲೆಳೆ ಅಂತರದಲ್ಲಿ ಪಾರು: ಮೈ ಝುಂ ಎನ್ನಿಸುತ್ತೆ ಈ ವಿಡಿಯೋ

ಸಿಂಹಗಳ ಹೆಸರು ಕೇಳಿದ್ರೇನೆ ಭಯವಾಗುತ್ತೆ. ಅಂತದ್ರಲ್ಲಿ ಸಿಂಹಗಳ ಬಳಿಗೆ ಹೋಗೋದು ಅಂದರೆ ಗುಂಡಿಗೆ ಗಟ್ಟಿ ಇರಲೇಬೇಕು. ಹೈದರಾಬಾದ್​​ನ ನೆಹರೂ ಮೃಗಾಲಯದಲ್ಲಿ ಆಫ್ರಿಕನ್​ ಸಿಂಹವನ್ನು ಇಡಲಾದ ಸ್ಥಳದಲ್ಲಿ ಅಲೆದಾಡುತ್ತಿದ್ದ 31 ವರ್ಷದ ವ್ಯಕ್ತಿಯನ್ನು ಸಿಬ್ಬಂದಿ ಸಿಂಹದ ಕೈನಿಂದ ಬಚಾವ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂಹದ ದಾಳಿಯಿಂದ ವ್ಯಕ್ತಿಯನ್ನು ರಕ್ಷಿಸಿದ ಮೃಗಾಲಯದ ಸಿಬ್ಬಂದಿ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿ ದೂರನ್ನು ದಾಖಲಿಸಿದ್ದಾರೆ. ಈ ರೀತಿ ಹುಚ್ಚಾಟ ಮೆರೆದ ವ್ಯಕ್ತಿಯನ್ನು ಜಿ. ಸಾಯಿಕುಮಾರ್​ ಎಂದು ಗುರುತಿಸಲಾಗಿದೆ.

ಮೈ ಝುಂ ಎನ್ನಿಸುವ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವ್ಯಕ್ತಿಯು ಕಲ್ಲು ಬಂಡೆಯ ಮೇಲೆ ಕುಳಿತು ಸಿಂಹವನ್ನೇ ನೋಡುತ್ತಿದ್ದರೆ ಸಿಂಹ ಕೂಡ ಆತನನ್ನೇ ಗುರಾಯಿಸಿದೆ. ಸುತ್ತಲಿದ್ದ ಜನರು ಕಿರಿಚುತ್ತಿರೋದನ್ನೂ ಸಹ ಕೇಳಬಹುದಾಗಿದೆ.

ಜಿ. ಸಾಯಿಕುಮಾರ್​​ ಸಿಂಹ ಇರುವ ಪ್ರದೇಶಕ್ಕೆ ಯಾರಿಗೂ ತಿಳಿಯದಂತೆ ಜಿಗಿದಿದ್ದಾನೆ. ಈ ಭಾಗಗಳಲ್ಲಿ ಓಡಾಟ ನಡೆಸಲು ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಆದರೂ ಸಹ ಮೃಗಾಲಯದ ಈ ನಿಯಮವನ್ನು ಸಾಯಿ ಕುಮಾರ್​ ಉಲ್ಲಂಘಿಸಿದ್ದಾನೆ ಎಂದು ನೆಹರು ಜೂಲಾಜಿಕಲ್​ ಪಾರ್ಕ್​ ಹೇಳಿಕೆ ಪ್ರಕಟಿಸಿದೆ.

ನೆಹರೂ ಝೂಲಾಜಿಕಲ್​ ಪಾರ್ಕ್​ನಲ್ಲಿ ಸಾರ್ವಜನಿಕರಿಗೆ ಸಂಪೂರ್ಣ ನಿಷೇಧ ಇರುವ ಪ್ರದೇಶಗಳಲ್ಲಿ ಸಿಂಹಗಳಿಗೆ ಓಡಾಟ ನಡೆಸಲು ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಇಂತಹ ನಿಷೇಧಿತ ಪ್ರದೇಶದಲ್ಲಿ ವ್ಯಕ್ತಿ ಓಡಾಡುವ ಮೂಲಕ ಆತಂಕ ಸೃಷ್ಟಿಸಿದ್ದಾರೆ. ಮೃಗಾಲಯದ ಸಿಬ್ಬಂದಿ ಈ ವ್ಯಕ್ತಿಯನ್ನು ಸಿಂಹದಿಂದ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಈ ವ್ಯಕ್ತಿಯನ್ನು ಬಹದ್ದೂರ್​ಪುರ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಮೃಗಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

— Surya Reddy (@jsuryareddy67) November 23, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...