alex Certify ಈ ಕ್ರೀಡಾಪಟುಗಳಿಗೆ ವಿವಿಧ ಕಂಪನಿಗಳಿಂದ ಕಾರ್‌ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕ್ರೀಡಾಪಟುಗಳಿಗೆ ವಿವಿಧ ಕಂಪನಿಗಳಿಂದ ಕಾರ್‌ ಗಿಫ್ಟ್

ಮಹೀದ್ರಾ ಮತ್ತು ಮಹೀಂದ್ರಾ, ರೆನಾಲ್ಟ್ , ಎಂ ಜಿ ಮೋಟಾರ್ಸ್ ಮುಂತಾದ ಕಾರು ಉತ್ಪಾದನಾ ಕಂಪನಿಗಳು ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ವಿಜೇತರಿಗೆ ಕಾರುಗಳನ್ನು ನೀಡುತ್ತಿದ್ದಾರೆ.

ಭಾರತಕ್ಕೆ ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ಈ ವರ್ಷದ ಪಂದ್ಯಾವಳಿಗಳಲ್ಲಿ ಏಳು ಮತ್ತು ಹದಿನೇಳು ಪದಕಗಳು ಬಂದಿವೆ.

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಆನಂದ್ ಮಹೀಂದ್ರಾ ಕಾರುಗಳನ್ನು ಕೊಡುವಲ್ಲಿ ಎತ್ತಿದ ಕೈ. ಜಾವೆಲಿನ್ ನಲ್ಲಿ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ ಅವರಿಗೆ ಮಹೀಂದ್ರಾ ಎಕ್ಸ್ ಯು ವಿ 700 ಕಾರ್ ನೀಡಿದ್ದಾರೆ. ಅಲ್ಲದೆ ಇದೇ ಮಾದರಿಯ ಕಾರನ್ನು ಪ್ಯಾರಾ ಒಲಂಪಿಕ್ಸ್ ನಲ್ಲಿ ಪದಕ ಗಳಿಸಿದ ಅವನಿ ಲೇಖರ ಮತ್ತು ಸುಮಿತ್ ಆಂಟಿಲ್ ಅವರಿಗೂ ಗಿಫ್ಟ್ ಮಾಡಿದ್ದಾರೆ.

BIG NEWS: ಭಾರತದ ಅತಿದೊಡ್ಡ ಸಿರಿವಂತ ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಹೆಚ್ಚಳ

ಟಾಟಾ ಕಂಪನಿಯೂ ಕೂಡ ಹಿಂದೆ ಬಿದ್ದಿಲ್ಲ. ಇವರು ಪಂದ್ಯಗಳಲ್ಲಿ ಪದಕದಿಂದ ವಂಚಿತರಾದ ಆಟಗಾರರಿಗೆ 9.59 ಲಕ್ಷ ಮೌಲ್ಯದ ಟಾಟಾ ಅಲ್ಟ್ರಾಜ್ ಕಾರನ್ನು 24 ಆಟಗಾರರಿಗೆ ನೀಡಿದ್ದಾರೆ. ಇದೆ ರೀತಿ ಕುಸ್ತಿಪಟುಗಳಾದ ರವಿಕುಮಾರ್ ದಹಿಯ, ಭಜರಂಗ್ ಪೂನಿಯಾ ಮತ್ತು ಮೀರಾಬಾಯಿ ಚಾನು ಇವರಿಗೆ ರೆನಾಲ್ಟ್ ಕೈಗೇರ್ ನೀಡಲಾಗಿದೆ.

ಎಂ ಜಿ ಮೋಟಾರ್ಸ್ ತನ್ನ ಎಂ ಜಿ ಅಸ್ಟೋರ್ ಕಾರನ್ನು ಇತ್ತೀಚಿಗೆ ಟೇಬಲ್ ಟೆನಿಸ್ ನಲ್ಲಿ ಪದಕ ತಂದ ಭಾವಿನ್ ಪಟೇಲ್ ಅವರಿಗೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...