alex Certify ಸ್ನೇಹಿತರೊಂದಿಗೆ ಪಾರ್ಟಿಗೆ ಹೋದಾಗಲೇ ಅವಘಡ: ನೀರಿಗೆ ಬಿದ್ದು ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರೊಂದಿಗೆ ಪಾರ್ಟಿಗೆ ಹೋದಾಗಲೇ ಅವಘಡ: ನೀರಿಗೆ ಬಿದ್ದು ನಾಪತ್ತೆ

ಕಾರವಾರ: ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ನೀರಿಗೆ ಬಿದ್ದು ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹೊಸಕಂಬಿ ಹಳ್ಳದಲ್ಲಿ ಭಾನುವಾರ ಸಂಜೆ ನಡೆದಿದೆ.

ಸುಹಾಸ್ ಕೃಷ್ಣನಾಯ್ಕ(28) ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾದ ಯುವಕ ಎಂದು ಹೇಳಲಾಗಿದೆ. ಅಂಕೋಲಾದ 15 ಜನರ ಸ್ನೇಹಿತರು ಹೊಸಕಂಬಿ ಹಳ್ಳದ ಪ್ರದೇಶದಲ್ಲಿ ಪಾರ್ಟಿ ಮಾಡಲು ತೆರಳಿದ್ದಾರೆ. ಚಿಪ್ಪೆಕಲ್ಲು ಆರಿಸಲು ಗೆಳೆಯರೊಂದಿಗೆ ಸುಹಾಸ್ ನೀರಿಗೆ ಇಳಿದಿದ್ದಾರೆ. ಸುಹಾಸ್ ಗೆ ಸರಿಯಾಗಿ ಈಜು ಬಾರದ ಕಾರಣ ನೋಡನೋಡುತ್ತಲೇ ನೀರಿನ ಹರಿವಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಗೆಳೆಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಪತ್ತೆ ಕಾರ್ಯ ಕೈಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...