ಪ್ರಪಂಚದಾದ್ಯಂತ ಆಹಾರ ಬಿಕ್ಕಟ್ಟು ಕಾಡ್ತಿದೆ. ಅನೇಕ ಭಾಗಗಳಲ್ಲಿ ಇಳುವರಿ ಕಡಿಮೆಯಾಗಿದೆ. ಕೈಗಾರಿಕಾ ಅಭಿವೃದ್ಧಿಯಿಂದಾಗಿ, ಫಲವತ್ತಾದ ಭೂಮಿ ಕಡಿಮೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ವಿಶ್ವದ ಅನೇಕ ಭಾಗಗಳಲ್ಲಿ ಹೊಸ ಹೊಸ ಆಹಾರಗಳನ್ನು ತಯಾರಿಸಲಾಗ್ತಿದೆ. ಫ್ರಾನ್ಸ್ ನ ರೆಸ್ಟೋರೆಂಟ್‌ನಲ್ಲಿ ಹುಳುಗಳು, ಮಿಡತೆಗಳಿಂದ ಆಹಾರ ತಯಾರಿಸಲಾಗ್ತಿದೆ.
ಫ್ರೆಂಚ್ ರೆಸ್ಟೋರೆಂಟ್ ಮೆನು ದಂಗಾಗಿಸುವಂತಿದೆ. ಮೆನುವಿನಲ್ಲಿ ಕೀಟಗಳಿಂದ ತಯಾರಿಸಿದ ಖಾದ್ಯವಿದೆ. ಮೆನು ಕಾರ್ಡ್‌ನಲ್ಲಿ ಸೀಗಡಿ ಸಲಾಡ್, ತರಕಾರಿಗಳೊಂದಿಗೆ ಕುರುಕುಲಾದ ಹುಳುಗಳು ಮತ್ತು ಚಾಕೊಲೇಟ್ ಮಿಡತೆಗಳು ಸೇರಿವೆ. ನಿಧಾನವಾಗಿ ಈ ಖಾದ್ಯಗಳು ಪ್ರಸಿದ್ಧವಾಗುತ್ತಿದೆ.
ಆಹಾರ ಪ್ರಿಯರು ಕೀಟಗಳಿಂದ ತಯಾರಿಸಿದ ಈ ಖಾದ್ಯವನ್ನು ತುಂಬಾ ಇಷ್ಟಪಡುತ್ತಾರೆ. ಈ ಕೀಟ ಆಹಾರದ ಸ್ವಾದಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ರೆಸ್ಟೋರೆಂಟ್ ಸಿಬ್ಬಂದಿ ಹೇಳಿದ್ದಾರೆ. ಮೊದಲು ಬಂದವರಿಗೆ ಜೀರುಂಡೆ ಹಿಟ್ಟಿನಿಂದ ಮಾಡಿದ ಪಾಸ್ತಾ ನೀಡಲಾಗುತ್ತದೆ. ಸಿಹಿ ಆಲೂಗಡ್ಡೆ, ಕಡಿಮೆ ಫ್ರೈ ಮಾಡಿದ ಸೀಗಡಿಯನ್ನೂ ಜನರು ಇಷ್ಟಪಡ್ತಿದ್ದಾರಂತೆ. ಯುರೋಪಿಯನ್ ಫುಡ್ ಸೇಫ್ಟಿ ಏಜೆನ್ಸಿ ಜೀರುಂಡೆ ಮಾನವನ ಆಹಾರಕ್ಕೆ ಯೋಗ್ಯವೆಂದಿದೆ. ಮೇ ತಿಂಗಳಿನಿಂದ ಮಾರಾಟಕ್ಕೆ ಅನುಮತಿ ನೀಡಿದೆ.