alex Certify ‌ʼಟಿಪ್ ಟಿಪ್ ಬರ್ಸಾ ಪಾನಿʼ ಗೆ ಫ್ರೆಂಚ್ ತಂಡದ ಬೊಂಬಾಟ್‌ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಟಿಪ್ ಟಿಪ್ ಬರ್ಸಾ ಪಾನಿʼ ಗೆ ಫ್ರೆಂಚ್ ತಂಡದ ಬೊಂಬಾಟ್‌ ಡಾನ್ಸ್

ಕತ್ರಿನಾ‌ ಕೈಫ್ ಹಾಕಿದ ಸ್ಟೆಪ್ಸ್‌ನಿಂದ ಖ್ಯಾತವಾದ ʼಟಿಪ್ ಟಿಪ್ ಬರ್ಸಾ ಪಾನಿʼ ಹಾಡಿಗೆ ಫ್ರೆಂಚ್ ವ್ಯಕ್ತಿಯ ಕುಣಿತ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಫ್ರೆಂಚ್‌‌ನ ಇನ್ ಸ್ಟಾಗ್ರಾಮರ್ ಜಿಕಾ ತಮ್ಮ ತಂಡದೊಂದಿಗೆ ಹಾಡಿಗೆ ತಕ್ಕಂತೆ ಜಬರ್ದಸ್ತ್ ಹೆಜ್ಜೆಗಳನ್ನು ಹಾಕುವುದು ವಿಡಿಯೋದಲ್ಲಿ ಗಮನ ಸೆಳೆಯುತ್ತದೆ. ವಿಭಿನ್ನ ಬಾಲಿವುಡ್ ಹಾಡುಗಳಿಗೆ ಸಾಮಾನ್ಯರು, ಸೆಲೆಬ್ರೆಟಿಗಳು ನೃತ್ಯ ಮಾಡುವ ವಿಡಿಯೊ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತವೆ. ಈಗ ಫ್ರೆಂಚ್ ಮೂಲದ ಜಿಕಾ ಜನಪ್ರಿಯ ಬಾಲಿವುಡ್ ಟ್ರ್ಯಾಕ್‌ಗಳಿಗೆ ಅಚ್ಚರಿ ರೀತಿಯಲ್ಲಿ ಸ್ಟೆಪ್ ಹಾಕಿದ್ದಾರೆ.

ಜನಾಭಿಪ್ರಾಯ ಪಡೆಯಲು ಧರ್ಮಾಧರಿತ ರಾಜಕಾರಣ ಸರಿಯಲ್ಲ – ಹೆಚ್.ಸಿ. ಮಹದೇವಪ್ಪ

@arena_futuroscope ನಲ್ಲಿ ಟಿಪ್ ಟಿಪ್ ವೈಬ್ಸ್ ಪೋಸ್ಟ್‌ನ ಶೀರ್ಷಿಕೆ ಗಮನಿಸಬಹುದು. ವಿಡಿಯೊ ಸುಮಾರು 2 ಲಕ್ಷ ವೀಕ್ಷಣೆಯಾಗಿದೆ. ನೆಟಿಜನ್ ಜಿಕಾ ಅವರ ಇನ್ವಾಲ್ವ್‌ಮೆಂಟ್ ಇಷ್ಟಪಟ್ಟಿದ್ದಾರೆ ಮತ್ತು ಅವರ ಅಭಿಪ್ರಾಯ ನೀಡಿದ್ದಾರೆ.

ಟಿಪ್ ಟಿಪ್ ಬರ್ಸಾ ಪಾನಿ ಹಾಡು ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ 2021 ರ ʼಸೂರ್ಯವಂಶಿʼ ಚಿತ್ರದ್ದು, ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್ ಕಂಠದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...