ಕೋವಿಡ್-19 ಲಾಕ್ ಡೌನ್ ಬಳಿಕ ಬಹುತೇಕರಲ್ಲಿ ಸೋಮಾರಿತನ ಆಕ್ರಮಿಸಿಕೊಂಡಿದೆ. ನಿಮ್ಮ ಫಿಟ್ನೆಸ್ ದಿನಚರಿಗೆ ಮರಳಲು ಸ್ಪೂರ್ತಿಯ ಅಗತ್ಯವಿದ್ದಲ್ಲಿ ಫ್ರೆಂಚ್ ಗಗನಯಾತ್ರಿ ಬಾಹ್ಯಾಕಾಶದಲ್ಲಿ ವ್ಯಾಯಾಮ ಮಾಡುವ ವಿಡಿಯೋ ನಿಮ್ಮನ್ನು ಪ್ರೇರೇಪಿಸುವುದರಲ್ಲಿ ಸಂಶಯವೇ ಇಲ್ಲ.
ಹೌದು, ಅಂತರಿಕ್ಷದಲ್ಲಿರುವಾಗಲೂ ಗಗನಯಾತ್ರಿ ತಾಲೀಮು ನಡೆಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಒಂದು ರೀತಿಯ ‘ಸ್ಪೇಸ್ ವರ್ಕೌಟ್ ಸೆಷನ್’ ಅನ್ನು ನೋಡಬಹುದು. ಇದರಲ್ಲಿ ಗಗನಯಾತ್ರಿ ಥಾಮಸ್ ಪೆಸ್ಕ್ವೆಟ್ ಅವರು ಭಾರಿ ವರ್ಕೌಟ್ ಮಾಡಿದ್ದಾರೆ.
‘ಫ್ಯಾಮಿಲಿ ಮ್ಯಾನ್’ ಮೊದಲ ಸರಣಿ ನೆನೆಪಿಸಿದ ಮನೋಜ್ ಬಾಜಪೇಯಿಗೆ ನೆಟ್ಟಿಗರಿಂದ ಎದುರಾಯ್ತು ಈ ಪ್ರಶ್ನೆ..!
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ‘ಬಾಹ್ಯಾಕಾಶದಲ್ಲಿ ಸ್ನಾಯು ನಿರ್ಮಾಣ’ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು ಶನಿವಾರ ಪೋಸ್ಟ್ ಮಾಡಲಾಗಿದ್ದು, ಒಂದು ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
https://www.youtube.com/watch?v=geday-pmsDI&feature=youtu.be