alex Certify Gruha Jyothi Scheme: ಬಾಡಿಗೆದಾರರ ಗಮನಕ್ಕೆ; ಉಚಿತ ವಿದ್ಯುತ್ ಪಡೆಯಲು ಈ ದಾಖಲೆಗಳು ಬೇಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Gruha Jyothi Scheme: ಬಾಡಿಗೆದಾರರ ಗಮನಕ್ಕೆ; ಉಚಿತ ವಿದ್ಯುತ್ ಪಡೆಯಲು ಈ ದಾಖಲೆಗಳು ಬೇಕು

ಬೆಂಗಳೂರು : ಬಾಡಿಗೆದಾರರಿಗೂ 200 ಯೂನಿಟ್ ಉಚಿತ ವಿದ್ಯುತ್ (Free electricity)ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸುವ ಬಾಡಿಗೆದಾರರು ತಮ್ಮ ಈ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಎಷ್ಟು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದಾರೆಂದು ದಾಖಲೆ ಇರಬೇಕು. ಮನೆ ಮಾಲೀಕ ಕಡ್ಡಾಯವಾಗಿ ಆಸ್ತಿ ತೆರಿಗೆ ಪಾವತಿಸಿರಬೇಕು. ವಿದ್ಯುತ್ ಬಿಲ್ (Electricity bill), ಮನೆ ಬಾಡಿಗೆ ಕರಾರುಪತ್ರ ಇರಬೇಕು. ಎಷ್ಟು ಬಾಡಿಗೆ ಮನೆಗಳಿವೆ ಎಂದು ಮಾಲೀಕ ಘೋಷಿಸಿರುವ ದಾಖಲೆಗಳಿರಬೇಕು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಬಾಡಿಗೆದಾರರು ಕಳ್ಳಾಟ ಮಾಡಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ (action) ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...