ಶಾಶ್ವತ ಖಾತೆ ಸಂಖ್ಯೆ (ಪಾನ್) ಎಷ್ಟು ಮುಖ್ಯವಾದ ದಾಖಲೆ ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಿಲ್ಲ. ದೇಶದಲ್ಲಿ ಮಾಡುವ ಯಾವುದೇ ಆರ್ಥಿಕ ವ್ಯವಹಾರಗಳಿಗೂ ಪಾನ್ ಬೇಕೇ ಬೇಕು ಎಂಬಂತಾಗಿದೆ.
ಜುಲೈ 2018 ಬಳಿಕ ಪಾನ್ ಕಾರ್ಡ್ ಪಡೆಯುವ ಮಂದಿಗೆ ಕ್ಯೂಆರ್ ಕೋಡ್ನೊಂದಿಗೆ ಕಾರ್ಡ್ ವಿತರಿಸುವ ಮೂಲಕ ನಕಲಿ ಪಾನ್ ಕಾರ್ಡ್ ವಂಚನೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿತ್ತು.
ಪಾನ್ ಕಾರ್ಡ್ ಮೇಲಿರುವ ಕ್ಯೂಆರ್ ಕೋಡ್ನಿಂದ ಪಾನ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ಪತ್ತೆ ಮಾಡಬಹುದಾಗಿದೆ. ನಿಮ್ಮ ಬಳಿ ಸ್ಮಾರ್ಟ್ಫೋನ್ ಇದ್ದಲ್ಲಿ ಆದಾಯ ತೆರಿಗೆ ಇಲಾಖೆಯ ಅಪ್ಲಿಕೇಶನ್ ಮೂಲಕ ಇದನ್ನು ಕಂಡುಕೊಳ್ಳಬಹುದು.
ಶಾಶ್ವತವಾಗಿ ʼವರ್ಕ್ ಫ್ರಂ ಹೋಂʼ ಬಯಸುತ್ತಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ
ನಿಮ್ಮ ಪಾನ್ ಕಾರ್ಡ್ ಅಸಲಿಯತ್ತು ತಿಳಿಯುವುದು ಹೀಗೆ:
* ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಪ್ಲೇ ಸ್ಟೋರ್ಗೆ ತೆರಳಿ ‘PAN QR Code Reader’ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
* ಅಪ್ಲಿಕೇಶನ್ನ ಡೆವಲಪರ್ ‘NSDL e-Governance Infrastructure Limited’ ಎಂದು ಖಾತ್ರಿ ಪಡಿಸಿಕೊಂಡ ಬಳಿಕವಷ್ಟೇ ಡೌನ್ಲೋಡ್ ಮಾಡಿಕೊಳ್ಳಿ.
* ಅಪ್ಲಿಕೇಶನ್ ತೆರೆದು ನೋಡಿದಾಗ ನಿಮಗೆ ಕ್ಯಾಮೆರಾ ವ್ಯೂಫೈಂಡರ್ನಲ್ಲಿ ಗ್ರೀನ್ ಪ್ಲಸ್ ರೀತಿಯ ಗ್ರಾಫಿಕ್ಸ್ ಕಾಣಲಿದೆ.
* ವ್ಯೂ ಫೈಂಡರ್ ಮೂಲಕ, ನಿಮ್ಮ ಫೋನ್ನ ಕ್ಯಾಮೆರಾದಲ್ಲಿ ಪಾನ್ ಕಾರ್ಡ್ ಮೇಲಿರುವ ಕ್ಯೂಆರ್ ಕೋಡ್ ಸೆರೆ ಹಿಡಿಯಿರಿ.
* ನಿಮ್ಮ ಕ್ಯಾಮೆರಾ ಕ್ಯೂಆರ್ ಕೋಡ್ ಸೆರೆ ಹಿಡಿಯುತ್ತಲೇ ಬೀಪ್ ಶಬ್ದವೊಂದು ಮೊಬೈಲ್ನಿಂದ ಬಂದು ಫೋನ್ ವೈಬ್ರೇಟ್ ಆಗಿ ನಿಮ್ಮ ಫೋನ್ನಲ್ಲಿ ಪಾನ್ ವಿವರಗಳು ಬರಲಿವೆ.
* ಕಾರ್ಡ್ನಲ್ಲಿರುವ ವಿವರಗಳು ನಿಮ್ಮ ಫೋನ್ನಲ್ಲಿರುವ ವಿವರಗಳನ್ನು ಹೊಂದುತ್ತವೆ ಎಂದು ಖಾತ್ರಿಪಡಿಸಿಕೊಳ್ಳಿ. ಹಾಗಿದ್ದರೆ ಮಾತ್ರವೇ ಪಾನ್ ಕಾರ್ಡ್ ಅಸಲಿ ಎಂದು ಅರ್ಥ. ಇಲ್ಲವಾದಲ್ಲಿ ಅದು ನಕಲಿ.