ವಿಮಾನ ನಿಲ್ದಾಣದ ಲಗೇಜ್ ರವಾನೆ ಮಾಡುವ ಜಾಗದಲ್ಲಿ ನೀವು ಏನೆಲ್ಲಾ ವಸ್ತುಗಳನ್ನು ನೋಡಿದ್ದರೂ ಅಲ್ಲಿ ಹಸಿ ಮಾಂಸದ ತುಂಡನ್ನಂತೂ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ.
ಆದರೆ, ವಾಷಿಂಗ್ಟನ್ನ ಸಿಯಾಟೆಲ್ ವಿಮಾನ ನಿಲ್ದಾಣದಲ್ಲಿ ಕೆಲ ಪ್ರಯಾಣಿಕರಿಗೆ ಇದನ್ನೇ ನೋಡಬೇಕಾಗಿ ಬಂದಿದೆ.
ಪ್ರಾಣಿ ಮಾಂಸಗಳ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ…!
ಬ್ಯಾಗೇಜ್ ಹೊತ್ತೊಯ್ಯುವ ಕನ್ವೇಯರ್ನಲ್ಲಿ ಮಾಂಸದ ತುಂಡೊಂದನ್ನು ನೋಡಿದ ಪ್ರಯಾಣಿಕರಿಗೆ ವಾಕರಿಕೆ ಬಂದು ಹಿಡಿಶಾಪ ಹಾಕುತ್ತಾ ಸಾಗುವಂತೆ ಆಗಿದೆ. ಲಗೇಜ್ ಕ್ಲೇಂ ವಿಭಾಗದ ಫುಟೇಜ್ ಅನ್ನು ಸಾರಿಗೆ ಭದ್ರತೆ ಆಡಳಿತ (ಟಿಎಸ್ಎ) ಆನ್ಲೈನ್ನಲ್ಲಿ ಶೇರ್ ಮಾಡಿದೆ.
“ಚಿಕನ್ ಹಾರಬಲ್ಲದೇ ? ಖಂಡಿತವಾಗಿಯೂ ಯಾವುದೇ ಪೌಲ್ಟ್ರಿ ಹೀಗೆ ಹಾರುವುದಿಲ್ಲ” ಎಂದು ಕ್ಯಾಪ್ಷನ್ ಹಾಕಿ ಕ್ಲಿಪ್ ಅನ್ನು ಏಜೆನ್ಸಿ ಶೇರ್ ಮಾಡಿಕೊಂಡಿದೆ.