alex Certify ಪಾಳು ಬಿದ್ದ ರೈಲ್ವೆ ನಿಲ್ದಾಣದಲ್ಲಿ ಸುಂದರ ಮನೆ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಳು ಬಿದ್ದ ರೈಲ್ವೆ ನಿಲ್ದಾಣದಲ್ಲಿ ಸುಂದರ ಮನೆ ನಿರ್ಮಾಣ

ನೀವು ರೈಲು ಹಾಗೂ ರೈಲು ನಿಲ್ದಾಣಗಳನ್ನ ಪ್ರೀತಿಸುವವರಾಗಿದ್ದರೆ ಈ ಮನೆಗಳು ನಿಜಕ್ಕೂ ನಿಮಗೆ ಇಷ್ಟ ಎನಿಸಬಹುದು. ಬ್ರಿಟನ್​​ನ ಹಳೆಯ ರೈಲ್ವೆ ನಿಲ್ದಾಣವೊಂದನ್ನ ಸುಸಜ್ಜಿತವಾದ ಮನೆಯನ್ನಾಗಿ ನಿರ್ಮಾಣ ಮಾಡಲಾಗಿದೆ.ರೈಲಿನ ಬಿಡಿ ಭಾಗಗಳನ್ನ ಬಳಕೆ ಮಾಡಿ ಉದ್ಯಾನವನ್ನೂ ನಿರ್ಮಿಸಲಾಗಿದ್ದು ಈ ಆಸ್ತಿಯ ಮೌಲ್ಯ 5.6 ಕೋಟಿ ಎಂದು ಹೇಳಲಾಗಿದೆ.

ಅಂದಹಾಗೆ ಈ ಮನೆಯ ನಿರ್ಮಾಣ ಕಾರ್ಯ ಇನ್ನೂ ಬಾಕಿ ಇದೆ. ಅಷ್ಟರಲ್ಲಾಗಲೇ ಮನೆಯ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಬ್ರಾಂಪ್​​ಫೋರ್ಡ್​ನಲ್ಲಿರುವ ಸ್ಟೇಷನ್​ ಹಾಲ್ಸ್​ ಮೇ 1 , 1885ರಿಂದ ಡೆವೋನ್​ ಎಕ್ಸೆ ವ್ಯಾಲಿ ರೈಲ್ವೆಯ ಭಾಗವಾಗಿತ್ತು. ಈ ನಿಲ್ದಾಣದ ಸಿಬ್ಬಂದಿಯನ್ನ 1923ರಲ್ಲಿ ಮನೆಗೆ ಕಳುಹಿಸಲಾಯ್ತು. ಇದಾದ ಬಳಿಕ ಈ ನಿಲ್ದಾಣವು ರೈಲುಗಳು ತಂಗುವ ಜಾಗವಾಗಿ ಬದಲಾಯ್ತು. ಸುಮಾರು 40 ವರ್ಷಗಳ ಬಳಿಕ ಈ ನಿಲ್ದಾಣವನ್ನ ಸಂಪೂರ್ಣವಾಗಿ ಬಂದ್​ ಮಾಡಲಾಯ್ತು.

ರೈಲ್ವೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನ ಮಾಡೋದನ್ನ ನಿಲ್ಲಿಸಿದ ಬಳಿಕ ಈ ನಿಲ್ದಾಣವನ್ನ ಮನೆಯನ್ನಾಗಿ ಬದಲಾಯಿಸಲಾಗಿದೆ. ಫ್ಲಾಟ್​ಫಾರಂನ್ನು ಸಿಟ್ಟಿಂಗ್​ ರೂಮ್​ ಆಗಿ ಮಾಡಲಾಗಿದ್ದರೆ ಟಿಕೆಟ್​ ಕಚೇರಿಯನ್ನ ಬೆಡ್​ ರೂಮ್​ ಆಗಿ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...