ನೀವು ರೈಲು ಹಾಗೂ ರೈಲು ನಿಲ್ದಾಣಗಳನ್ನ ಪ್ರೀತಿಸುವವರಾಗಿದ್ದರೆ ಈ ಮನೆಗಳು ನಿಜಕ್ಕೂ ನಿಮಗೆ ಇಷ್ಟ ಎನಿಸಬಹುದು. ಬ್ರಿಟನ್ನ ಹಳೆಯ ರೈಲ್ವೆ ನಿಲ್ದಾಣವೊಂದನ್ನ ಸುಸಜ್ಜಿತವಾದ ಮನೆಯನ್ನಾಗಿ ನಿರ್ಮಾಣ ಮಾಡಲಾಗಿದೆ.ರೈಲಿನ ಬಿಡಿ ಭಾಗಗಳನ್ನ ಬಳಕೆ ಮಾಡಿ ಉದ್ಯಾನವನ್ನೂ ನಿರ್ಮಿಸಲಾಗಿದ್ದು ಈ ಆಸ್ತಿಯ ಮೌಲ್ಯ 5.6 ಕೋಟಿ ಎಂದು ಹೇಳಲಾಗಿದೆ.
ಅಂದಹಾಗೆ ಈ ಮನೆಯ ನಿರ್ಮಾಣ ಕಾರ್ಯ ಇನ್ನೂ ಬಾಕಿ ಇದೆ. ಅಷ್ಟರಲ್ಲಾಗಲೇ ಮನೆಯ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬ್ರಾಂಪ್ಫೋರ್ಡ್ನಲ್ಲಿರುವ ಸ್ಟೇಷನ್ ಹಾಲ್ಸ್ ಮೇ 1 , 1885ರಿಂದ ಡೆವೋನ್ ಎಕ್ಸೆ ವ್ಯಾಲಿ ರೈಲ್ವೆಯ ಭಾಗವಾಗಿತ್ತು. ಈ ನಿಲ್ದಾಣದ ಸಿಬ್ಬಂದಿಯನ್ನ 1923ರಲ್ಲಿ ಮನೆಗೆ ಕಳುಹಿಸಲಾಯ್ತು. ಇದಾದ ಬಳಿಕ ಈ ನಿಲ್ದಾಣವು ರೈಲುಗಳು ತಂಗುವ ಜಾಗವಾಗಿ ಬದಲಾಯ್ತು. ಸುಮಾರು 40 ವರ್ಷಗಳ ಬಳಿಕ ಈ ನಿಲ್ದಾಣವನ್ನ ಸಂಪೂರ್ಣವಾಗಿ ಬಂದ್ ಮಾಡಲಾಯ್ತು.
ರೈಲ್ವೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನ ಮಾಡೋದನ್ನ ನಿಲ್ಲಿಸಿದ ಬಳಿಕ ಈ ನಿಲ್ದಾಣವನ್ನ ಮನೆಯನ್ನಾಗಿ ಬದಲಾಯಿಸಲಾಗಿದೆ. ಫ್ಲಾಟ್ಫಾರಂನ್ನು ಸಿಟ್ಟಿಂಗ್ ರೂಮ್ ಆಗಿ ಮಾಡಲಾಗಿದ್ದರೆ ಟಿಕೆಟ್ ಕಚೇರಿಯನ್ನ ಬೆಡ್ ರೂಮ್ ಆಗಿ ಮಾಡಲಾಗಿದೆ.