alex Certify ಅಕ್ರಮ ಆಸ್ತಿ ಕೇಸ್​ ಮುಗಿಸಲು 1 ಕೋಟಿ ರೂ. ಡೀಲ್….​!​ ಮಾಜಿ ಸಚಿವ ಅರೆಸ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಆಸ್ತಿ ಕೇಸ್​ ಮುಗಿಸಲು 1 ಕೋಟಿ ರೂ. ಡೀಲ್….​!​ ಮಾಜಿ ಸಚಿವ ಅರೆಸ್ಟ್​

ಚಂಡೀಗಢ: ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಂಜಾಬ್ ಮಾಜಿ ಕೈಗಾರಿಕಾ ಸಚಿವ ಸುಂದರ್ ಶಾಮ್ ಅರೋರಾ ಅವರನ್ನು ವಿಚಕ್ಷಣಾ ದಳವು ಬಂಧಿಸಿದೆ. ತಮ್ಮ ವಿರುದ್ಧದ ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ಅಧಿಕಾರಿಯೊಬ್ಬರಿಗೆ 50 ಲಕ್ಷ ರೂಪಾಯಿ ಲಂಚ ನೀಡಿರುವ ಗಂಭೀರ ಆರೋಪ ಅರೋರಾ ಅವರ ಮೇಲಿದೆ.

ಪಂಜಾಬ್​ನ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಅರೋರಾ ಅವರು, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣವನ್ನು ತಮ್ಮ ಪರವಾಗಿ ಇತ್ಯರ್ಥಪಡಿಸಲು ಎಐಜಿ ಮನಮೋಹನ್ ಕುಮಾರ್ ಅವರಿಗೆ 50 ಲಕ್ಷ ರೂಪಾಯಿ ಲಂಚ ಕೊಡುವ ಸಂದರ್ಭದಲ್ಲಿ ಬಂಧಿಸಲಾಗಿದೆ.

ಇವರ ವಿರುದ್ಧ ಎಐಜಿ ಮನಮೋಹನ್ ಕುಮಾರ್ ದೂರು ದಾಖಲು ಮಾಡಿದ್ದರು. ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಲು ಒಂದು ಕೋಟಿ ರೂಪಾಯಿ ನೀಡುವುದಾಗಿ ಅವರು ಹೇಳಿರುವುದಾಗಿ ಮನಮೋಹನ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದರು. ಮೊದಲ ಕಂತಿನ ರೂಪದಲ್ಲಿ 50 ಲಕ್ಷ ರೂಪಾಯಿ ನೀಡುತ್ತಿದ್ದ ವೇಳೆ ಮೊದಲೇ ರೂಪಿಸಿದ ಯೋಜನೆ ಪ್ರಕಾರ ಅರೋರಾ ಅವರನ್ನು ಬಂಧಿಸಲಾಗಿದೆ.

ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ಒಳಪಡಿಸಲಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಂಜಾಬ್​ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸೇರಲು ಕಾಂಗ್ರೆಸ್ ತೊರೆದಿದ್ದ ಅರೋರಾ, ಪಂಜಾಬ್ ಸಣ್ಣ ಕೈಗಾರಿಕೆಗಳು ಮತ್ತು ರಫ್ತು ನಿಗಮದ (ಪಿಎಸ್‌ಐಇಸಿ) ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆಯೂ ತನಿಖೆ ಎದುರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...