ಗುಜರಾತ್ನ ಮೆಹ್ಸಾನಾದಲ್ಲಿ ತಿರಂಗ ಯಾತ್ರೆ ವೇಳೆ ಗುಜರಾತ್ನ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಗಾಯಗೊಂಡಿದ್ದಾರೆ.
ಮೆರವಣಿಗೆಯ ನಡುವೆ ದನಗಳ ಹಿಂಡು ಬಂದಿದ್ದು, ಇದರಿಂದ ತ್ರಿವರ್ಣ ಯಾತ್ರೆ ವೇಳೆ ಗೊಂದಲ ಉಂಟಾಗಿತ್ತು. ಈ ವೇಳೆ ನೂಕಾಟ ನಡೆದು ಅನೇಕರಿಗೆ ಗಾಯಗಳಾಯಿತು.
ಆಗಸ್ಟ್ 13ರಿಂದ 15ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಮೂರು ದಿನಗಳ “ತಿರಂಗಾ ಅಭಿಯಾನ” ವನ್ನು ಘೋಷಿಸಿದ್ದು, ಈ ಅಭಿಯಾನದ ಅಂಗವಾಗಿ ದೇಶದಾದ್ಯಂತ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ಈ ಕರೆಯ ಭಾಗವಾಗಿ ಗುಜರಾತ್ನಲ್ಲೂ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ನೂರಾರು ಜನರು ತ್ರಿವರ್ಣ ಧ್ವಜ ಹಿಡಿದು ಸಾಗುತ್ತಿದ್ದ ವೇಳೆ ಒಂದು ಹಸು ಗಾಬರಿಯಿಂದ ಅವರತ್ತ ನುಗ್ಗಿದೆ. ಇದರಿಂದ ಅನೇಕರು ನೆಲಕ್ಕುರುಳಿದರು. ಪಟೇಲ್ ಕೂಡ ಕೆಳಗುರುಳಿದ ವಿಡಿಯೋ ವೈರಲ್ ಆಗಿದೆ. ತಕ್ಷಣವೇ ಪಟೇಲ್ ಸೇರಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪಟೇಲ್ ಅವರ ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.