alex Certify ಕ್ಯಾಬ್​ಗೆ ಹಣ ನೀಡುವುದನ್ನು ಮರೆತ ಗೂಗಲ್​ ಅಧಿಕಾರಿ: ಚಾಲಕನ ವರ್ತನೆಗೆ ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಬ್​ಗೆ ಹಣ ನೀಡುವುದನ್ನು ಮರೆತ ಗೂಗಲ್​ ಅಧಿಕಾರಿ: ಚಾಲಕನ ವರ್ತನೆಗೆ ಶ್ಲಾಘನೆಗಳ ಮಹಾಪೂರ

ವಿಮಾನ ಹತ್ತುವ ಗಡಿಬಿಡಿಯಲ್ಲಿ ಪ್ರಯಾಣಿಕರೊಬ್ಬರು ಕ್ಯಾಬ್​ ಚಾಲಕನಿಗೆ ಹಣ ನೀಡುವುದನ್ನು ಮರೆತಾಗ ಕ್ಯಾಬ್​ ಚಾಲಕ ವರ್ತಿಸಿದ ರೀತಿಗೆ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕ್ಯಾಬ್​ ಚಾಲಕನ ಪ್ರಾಮಾಣಿಕತೆಯ ಕುರಿತು ಗೂಗಲ್ ಮತ್ತು ಟ್ವಿಟರ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪರ್ಮಿಂದರ್ ಸಿಂಗ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು, ಅದೀಗ ಭಾರಿ ವೈರಲ್​ ಆಗಿದೆ. ಕ್ಯಾಬ್​ನಲ್ಲಿ ಪ್ರಯಾಣಿಸಿದ ತಾನು ಹಣವನ್ನು ನೀಡಲು ಮರೆತುಹೋದೆ. ನಂತರ ನಾನು ಕರೆ ಮಾಡಿದಾಗ ಕ್ಯಾಬ್​ ಚಾಲಕ ಪರವಾಗಿಲ್ಲ, ಇನ್ನೊಮ್ಮೆ ನೀಡಿ ಎಂದ. ನಾನು ಭಾರತೀಯ ಪ್ರಜೆ ಅಲ್ಲ ಎಂದು ತಿಳಿದಿದ್ದರೂ ಕ್ಯಾಬ್​ ಚಾಲಕ ಈ ರೀತಿ ವರ್ತಿಸಿದ್ದುದು ಬಹಳ ಕುತೂಹಲವಾಯಿತು ಎಂದು ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ನಂತರ ಆತನ ವಿವರ ಪಡೆದು ಹಣವನ್ನು ನೀಡಲಾಯಿತು. ಆದರೆ ಇಂಥವರೂ ಈಗ ಸಿಗುತ್ತಾರೆ ಎಂದು ತಿಳಿಯುವುದೇ ಕಷ್ಟ. ಇಂದಿನ ಕಾಲದಲ್ಲಿ ಎಲ್ಲವೂ ಹಣದಿಂದಲೇ ನಡೆಯುವಾಗ ಇಷ್ಟು ಮೃದು ಮಾತಿನಲ್ಲಿ ಚಾಲಕ ವರ್ತಿಸಿದ್ದುದು ಅಚ್ಚರಿ ತರುವಂಥದ್ದು ಎಂದು ಅವರು ಬರೆದುಕೊಂಡಿದ್ದಾರೆ. ಈ ಕ್ಯಾಬ್​ ಚಾಲಕನಿಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...