ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಏಕೀಕೃತ ಪಾವತಿಗಳ ಇಂಟರ್ಫೇಸ್ ಯುಪಿಐ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತಿದೆ.
ಹಣ ವರ್ಗಾವಣೆಗೆ ಯುಪಿಐ ಸುರಕ್ಷಿತ ಪ್ಲಾಟ್‌ಫಾರ್ಮ್ ಆಗಿದ್ದು, ಒಬ್ಬರ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಒದಗಿಸದೆಯೇ ಹಣ ವರ್ಗಾವಣೆ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
25 ವರ್ಷದ ಬಳಿಕ ಅರಳಿದೆ ವಿಚಿತ್ರ ಹೆಸರಿನ ಈ ಸಸ್ಯ…!
ಯುಪಿಐ ಪಿನ್ ಹೇಗೆ ರಚಿಸೋದು?
ಯುಪಿಐ ಪಿನ್ ಅನ್ನು ಪಾವತಿ ಮೋಡ್ ಆಗಿ ಬಳಸಲು ಬಳಕೆದಾರರು ಮೊದಲು ಬ್ಯಾಂಕ್‌ನಲ್ಲಿ ಸೇವೆಗೆ ಸೈನ್ ಅಪ್ ಮಾಡಬೇಕಾಗುತ್ತದೆ.
ಭೀಮ್, ಗೂಗಲ್ ಪೇ ಇತ್ಯಾದಿ ಯುಪಿಐ ಅಪ್ಲಿಕೇಶನ್‌ಗೆ ಹೋಗಿ ಅಪ್ಲಿಕೇಶನ್‌ನಲ್ಲಿ ‘ಬ್ಯಾಂಕ್ ಖಾತೆ’ ವಿಭಾಗಕ್ಕೆ ಸ್ಕ್ರಾಲ್ ಮಾಡಬೇಕು. ನಿರ್ದಿಷ್ಟ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಈ ವಿಭಾಗವು ತೋರಿಸುತ್ತದೆ.
ಯುಪಿಐ ಪಿನ್ ಹೊಂದಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡುವುದು.
ಡೆಬಿಟ್ ಎಟಿಎಂ ಕಾರ್ಡ್‌ನ ಕೊನೆಯ ಆರು ಅಂಕೆಗಳು ಮತ್ತು ‘ಎಕ್ಸ್‌ಪೈರಿ ಡೇಟ್’ ಅನ್ನು ನಮೂದಿಸಬೇಕು. ಆಗ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್‌ನಿಂದ ಒಟಿಪಿ ಬರಲಿದೆ.
ಮುಂದಿನ ಸ್ಕ್ರೀನ್‌ನಲ್ಲಿ ಖಾತೆಗೆ ಹೊಂದಿಸಲು ಬಯಸುವ ಒಟಿಪಿ ಮತ್ತು ಯುಪಿಐ ಪಿನ್ ಅನ್ನು ನಮೂದಿಸಬೇಕು. ನಂತರ ಪ್ರಕ್ರಿಯೆ ಮುಗಿಸುವ ಬಟನ್ ಕ್ಲಿಕ್ ಮಾಡಿ ಪ್ರಕ್ರಿಯೆ ಮುಗಿಸಬಹುದು. ಬಳಿಕ ಹಣವನ್ನು ಕಳುಹಿಸಬಹುದು.