
ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಮರಿಯನ್ನು ಅರಣ್ಯ ತಂಡ ಪತ್ತೆ ಮಾಡಿದೆ. ಆನೆಮರಿಯನ್ನು ಹಳ್ಳಕ್ಕೆ ಬಿದ್ದ ನಂತರ ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ. ಮರಿಗೆ ಚಿಕಿತ್ಸೆ ನೀಡಿದ ನಂತರ ಅವರು ಅದನ್ನು ಸುರಕ್ಷಿತವಾಗಿ ತಾಯಿಯ ಬಳಿಗೆ ಕರೆದೊಯ್ದಿದ್ದಾರೆ.
ಕರೂರಿನಲ್ಲಿ ಲಸಿಕೆ ಪಡೆಯುವವರಿಗೆ ಉಡುಗೊರೆಗಳ ಸುರಿಮಳೆ…!
ಭಾರತೀಯ ಅರಣ್ಯ ಅಧಿಕಾರಿ ಸುಧಾ ರಾಮನ್ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಆನೆ ಮರಿ ಕಾಡಿನಲ್ಲಿ ಅರಣ್ಯ ಸಿಬ್ಬಂದಿ ಜೊತೆಯಲ್ಲಿ ಜಾಗರೂಕತೆಯಿಂದ ಮತ್ತು ಸಂತೋಷದಿಂದ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ತಿಳಿದಿರುವಂತೆ ಅದು ಸಂತೋಷದಿಂದ ನಡೆಯುತ್ತಿದೆ.
KBC ಸ್ಪರ್ಧಿ ತಂದೆಯ ಹಿನ್ನಲೆ ತಿಳಿದು ಅಚ್ಚರಿಗೊಳಗಾದ ʼಬಿಗ್ ಬಿʼ
“ಈ ಪುಟ್ಟ ಆನೆಮರಿ ತನ್ನ ತಾಯಿಯನ್ನು ಮತ್ತೆ ಸೇರಿಕೊಳ್ಳಲು ತಮಿಳುನಾಡು ಅರಣ್ಯ ಸಿಬ್ಬಂದಿ ತಂಡದ ಝೆಡ್ + ಭದ್ರತೆಯೊಂದಿಗೆ ಸಂತೋಷದಿಂದ ನಡೆಯುತ್ತಿದೆ. ಮರಿಯಾನೆ ಸಿಕ್ಕಾಗ ಏಕಾಂಗಿಯಾಗಿದ್ದು, ಗಾಯಗೊಂಡಿತ್ತು. ಟಿಎನ್ ಅರಣ್ಯ ಸಿಬ್ಬಂದಿ ತಂಡ ಆನೆಮರಿಯನ್ನು ರಕ್ಷಿಸಿದೆ. ಅದಕ್ಕೆ ಚಿಕಿತ್ಸೆ ನೀಡಿ ಮತ್ತು ತಾಯಿಯೊಂದಿಗೆ ಸೇರಲು ಬೆಂಗಾವಲು ನೀಡಿದೆ” ಎಂದು ಸುಧಾ ರಾಮನ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಇನ್ನು ಅರಣ್ಯ ಸಿಬ್ಬಂದಿಯ ಈ ಪ್ರಯತ್ನಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.