ಪುತ್ರ ಹೋಮ್ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ತಂದೆ ಬಾಲಕನ ಕಾಲಿಗೆ ಹಗ್ಗ ಬಿಗಿದು ಉಲ್ಟಾ ನೇತು ಹಾಕಿ ಚಿತ್ರಹಿಂಸೆ ನೀಡಿದ ಘಟನೆ ರಾಜಸ್ಥಾನದ ಚಿತ್ತೋರ್ಗರ್ನ ಬೂಂದಿ ಎಂಬಲ್ಲಿ ನಡೆದಿದೆ. ಬಾಲಕನನ್ನು ಹಗ್ಗ ಕಟ್ಟಿ ಉಲ್ಟಾ ನೇತು ಹಾಕಿದ ಬಳಿಕ ಕೋಲು ತೆಗೆದುಕೊಂಡು ಹೊಡೆಯಲು ಆರಂಭಿಸಿದ್ದಾನೆ.
ಮಗನಿಗೆ ಚಿತ್ರಹಿಂಸೆ ನೀಡಿದ್ದನ್ನು ನೋಡಿ ತಾಯಿ ಮಧ್ಯಪ್ರವೇಶಿಸಿದ್ದಾರೆ. ಬಳಿಕ ಬಾಲಕನ ಮಾವ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಬಾಲಕನಿಗೆ ಚಿತ್ರ ಹಿಂಸೆ ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿತ್ತೋರ್ಗಢ ಜಿಲ್ಲೆಯ ವೈಕುಂಠಪುರ ಕ್ಷೇತ್ರದ ಬೇಗು ಗ್ರಾಮದಲ್ಲಿ ವಾಸಿಸುವ ಬಾಲಕನ ಚಿಕ್ಕಪ್ಪ ಮಕ್ಕಳ ಸಹಾಯವಾಣಿಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮಕ್ಕಳ ಸಹಾಯವಾಣಿ ಸಿಬ್ಬಂದಿಯು ಚಿತ್ತೋರಗಢ ಠಾಣೆಗೆ ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ್ದಾರೆ. ಆದರೆ ಬೇಗು ಠಾಣಾ ವ್ಯಾಪ್ತಿಗೆ ಸೇರಿದ ಪ್ರಕರಣವಾದ್ದರಿಂದ ಬೇಗು ಪೊಲೀಸರಿಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ.