
ಶಿವಮೊಗ್ಗ: ಶಿವಮೊಗ್ಗದ ಹರಮಘಟ್ಟ ಆಲದಹಳ್ಳಿ ಗ್ರಾಮದಲ್ಲಿ ಸುಮಾರು 60 ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ ಆಗಿದ್ದು, ಅಸ್ವಸ್ಥ 30 ಮಂದಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಹರಮಘಟ್ಟ ಆಲದಹಳ್ಳಿಯಲ್ಲಿ ಮದುವೆ ರಿಸೆಪ್ಷನ್ ನಲ್ಲಿ ಊಟ ಮಾಡಿದ್ದ 60ಕ್ಕೂ ಹೆಚ್ಚು ಜನರಿಗೆ ಫುಡ್ ಪಾಯ್ಸನ್ ಆಗಿದೆ. 30 ಕ್ಕೂ ಅಧಿಕ ಮಂದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಲವರು ಹೊಳಲೂರು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಕುಟುಂಬವೊಂದರ ಮದುವೆ ಆರತಕ್ಷತೆ ಸಮಾರಂಭದಲ್ಲಿ ಊರಿನ ಜನ ಊಟ ಮಾಡಿದ್ದಾರೆ. ಎಲ್ಲರಿಗೂ ಬಹುತೇಕ ವಾಂತಿಬೇಧಿ ಆಗಿದೆ. ಕೆಲವರಿಗೆ ತಲೆನೋವು, ಸುಸ್ತಾಗಿದ್ದು ಅಸ್ವಸ್ಥರು ಆಸ್ಪತ್ರೆಗೆ ಹೋಗಿ ತೋರಿಸಿದಾಗ ಫುಡ್ ಪಾಯ್ಸನ್ ಆಗಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.