ಜನ ಸಾಮಾನ್ಯರಿಗೆ ಇದೊಂದು ಗುಡ್ ನ್ಯೂಸ್. ಒಂದು ವಾರದೊಳಗೆ ಖಾದ್ಯ ತೈಲಗಳ ಎಂಆರ್ಪಿಯನ್ನು ಲೀಟರ್‌ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಆಹಾರ ಸಚಿವಾಲಯ ಬುಧವಾರ ತೈಲ ಉತ್ಪಾದನಾ ಕಂಪನಿಗಳಿಗೆ ಸೂಚಿಸಿದೆ.
ಜಾಗತಿಕ ಬೆಲೆಗಳ ಕುಸಿತದ ನಡುವೆ ಅಡುಗೆ ಎಣ್ಣೆಗಳ ಚಿಲ್ಲರೆ ಬೆಲೆಯಲ್ಲಿ ಇಳಿಕೆಯ ಬಗ್ಗೆ ತಯಾರಕರೊಂದಿಗೆ ಚರ್ಚಿಸಲು ಆಹಾರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆಯವರು ಸಭೆ ನಡೆಸಿದರು. ನಂತರ ಈ ಘೋಷಣೆ ಮಾಡಿದ್ದಾರೆ.
ಜಾಗತಿಕ ಬೆಲೆಗಳಲ್ಲಿನ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ನಾವು ಉತ್ಪಾದಕರಿಗೆ ಸೂಚಿಸುತ್ತಿದ್ದೇವೆ ಎಂದು ಪಾಂಡೆ ಪ್ರತಿಕ್ರಿಯಿಸಿದ್ದಾರೆ.
ಈ ಹಕ್ಕಿಗಳಿಂದ ಮಾನವರು ಕಲಿಯಬೇಕಾದದ್ದು ಸಾಕಷ್ಟಿದೆ..! ನೆಟ್ಟಿಗರ ಮನಗೆದ್ದಿದೆ ಈ ಹೃದಯಸ್ಪರ್ಶಿ ವಿಡಿಯೋ
ಕಳೆದ ತಿಂಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಅಂತರಾಷ್ಟ್ರೀಯ ದರಗಳ ಕಡಿಮೆಯಾಗುತ್ತಿದ್ದಂತೆ ಸರ್ಕಾರ ಮಧ್ಯ ಪ್ರವೇಶ ಮಾಡಿತ್ತು. ಅನೇಕ ಖಾದ್ಯ ತೈಲ ಸಂಸ್ಥೆಗಳು ತಮ್ಮ ಬೆಲೆಯನ್ನು ಲೀಟರ್‌ಗೆ 10-15 ರೂ. ಕಡಿಮೆ ಮಾಡಿದ್ದವು.
ಭಾರತವು ಅಗತ್ಯ ಖಾದ್ಯ ತೈಲದ ಶೇಕಡಾ 60ಕ್ಕಿಂತ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ. 2020-21ರಲ್ಲಿ ಖಾದ್ಯ ತೈಲದ ಆಮದು 131.3 ಲಕ್ಷ ಟನ್ಗಳಷ್ಟಿತ್ತು. ಬೆಲೆ ಏರಿಕೆ ಕೂಗು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಒಂದಷ್ಟು ಕ್ರಮಕೈಗೊಳ್ಳುತ್ತಿದ್ದು, ಇದೀಗ ಉತ್ಪಾದಕರನ್ನು ಕರೆದು ಮಾತನಾಡಿದೆ.