alex Certify BIG NEWS: ಆಹಾರ ಇಲಾಖೆ ಎಲ್ಲಾ ಗೋದಾಮುಗಳಿಗೆ CCTV ಅಳವಡಿಕೆಗೆ ನಿರ್ಧಾರ: ಇಲ್ಲಿದೆ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಹಾರ ಇಲಾಖೆ ಎಲ್ಲಾ ಗೋದಾಮುಗಳಿಗೆ CCTV ಅಳವಡಿಕೆಗೆ ನಿರ್ಧಾರ: ಇಲ್ಲಿದೆ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಮಾಹಿತಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು:

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಎಲ್ಲಾ ಸಗಟು ಗೋದಾಮುಗಳಿಗೆ 12 ಕೋಟಿ ರೂ.ವೆಚ್ಚದಲ್ಲಿ ಸಿ.ಸಿ.ಟಿ.ವಿ ಅಳವಡಿಕೆಗೆ ಕೆ.ಟಿ.ಟಿ.ಪಿ ಕಾಯ್ದೆಯನ್ವಯ ಟೆಂಡರ್ ಕರೆಯಲು ನಿರ್ಧಾರ.

44 ಕೋಟಿ ರೂ. ವೆಚ್ಚದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಲೋಕಲ್ ಪ್ಲಾನಿಂಗ್ ಏರಿಯಾ ವ್ಯಾಪ್ತಿಯಲ್ಲಿನ ನಂಜನಗೂಡು ತಾಲ್ಲೂಕು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮಗಳ ಅಭಿವೃದ್ಧಿ ಕಾರ್ಯಗಳು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಅನುಷ್ಠಾನಕ್ಕೆ ತೀರ್ಮಾನ.

ಗದಗ – ಬೆಟಗೇರಿ ನಗರಸಭೆಗೆ ಅಮೃತ 2.0 ಯೋಜನೆಯಡಿ ಅಂದಾಜು 34 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕೆ ಅನುಮತಿ.

1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಆಯ್ದ 17 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಸರ ಪರಿಹಾರ ನಿಧಿಯಡಿ 750 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣ ಹಾಗೂ ಉನ್ನತೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.

ಪ್ರಸಕ್ತ ಸಾಲಿನಲ್ಲಿ ದೈಹಿಕ ವಿಕಲಚೇತನರಿಗೆ 36 ಕೋಟಿ ಅಂದಾಜು ವೆಚ್ಚದಲ್ಲಿ 4,000 ಹೆಚ್ಚುವರಿ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ನಿರ್ಧಾರ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ 4 ಲಕ್ಷ ಮೆಟ್ರಿಕ್ ಟನ್ ರಾಗಿ ಸಂಗ್ರಹಿಸಲು ಅಗತ್ಯವಿರುವ 80 ಲಕ್ಷ ಗೋಣಿಚೀಲಗಳ ಖರೀದಿಗೆ 76 ಕೋಟಿ ರೂ. ಅನುದಾನ ಒದಗಿಸಲು ಸಮ್ಮತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...