alex Certify ಗ್ರಾಹಕನಿಂದ ಬಂದ ಫುಡ್ ಡೆಲಿವರಿ ಆರ್ಡರ್‌ ಕಂಡು ಚಾಲಕ ಕಂಗಾಲು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕನಿಂದ ಬಂದ ಫುಡ್ ಡೆಲಿವರಿ ಆರ್ಡರ್‌ ಕಂಡು ಚಾಲಕ ಕಂಗಾಲು….!

ಫುಡ್‌ ಡೆಲಿವರಿ ಸೇವೆಗಳ ಮೂಲಕ ಮನೆ ಬಾಗಿಲಿಗೇ ಬಿಸಿಬಿಸಿ ಖಾದ್ಯಗಳನ್ನು ತರಿಸಿ ತಿನ್ನುವ ಮಜಾ ಏನೆಂದು ಕಳೆದ 4-5 ವರ್ಷಗಳಿಂದ ಜಗತ್ತಿನಾದ್ಯಂತ ಜನರು ಚೆನ್ನಾಗಿ ಕಂಡುಕೊಂಡಿದ್ದಾರೆ. ಆದರೆ ಈ ಗಿರಾಕಿಯಿಂದ ಬಂದ ಫುಡ್ ಡೆಲಿವರಿ ಒಂದು ಡೆಲಿವರಿ ಚಾಲಕನಿಗೆ ಭಾರೀ ತಲೆನೋವು ತಂದಿದೆ.

ಟಿಕ್‌ಟಾಕ್ ಬಳಕೆದಾರ, ಅಮೆರಿಕದ ಓಹಿಯೋದ ಕಯೆಲುಮ್ ಗ್ರಾಂಟ್ ತಮ್ಮ ಜಾಗದಿಂದ 1,190 ಕಿಮೀಗಳಷ್ಟು ದೂರದಲ್ಲಿರುವ ರೋಡ್ ದ್ವೀಪದಿಂದ ಡೆಲಿವರಿ ವಿನಂತಿ ಬಂದಿದ್ದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಒಂದು ವೇಳೆ ಕಯೆಲುಮ್ ಏನಾದರೂ ದಿನವಿಡೀ ರಸ್ತೆಯಲ್ಲಿ ಪಯಣಿಸಿದ್ದರೆ ಅದಕ್ಕೆ ಪ್ರತಿಯಾಗಿ ಅವರಿಗೆ ಬರೀ $9.25 (694 ರೂ.) ಮಾತ್ರ ಸಿಗುತ್ತಿತ್ತು.

‘ಲಿವ್ ಇನ್ ರಿಲೇಷನ್ ಶಿಪ್’ ಜೀವನದ ಭಾಗ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ನಿರೀಕ್ಷಿಸಿದಂತೆಯೇ ಕಯೆಲುಮ್ ಈ ದುಸ್ಸಾಹಸಕ್ಕೆ ಕೈ ಹಾಕಲು ಹೋಗಲಿಲ್ಲ. ತಮಗೆ ಬಂದ ಡೆಲಿವರಿ ವಿನಂತಿಗೆ ಪ್ರತಿಕ್ರಿಯಿಸಿದ ಕಯೆಲುಮ್, “ನೀವು ರೋಡ್ ದ್ವೀಪದಲ್ಲಿದ್ದು, ಡೋರ್‌ಡ್ಯಾಶ್‌ನಲ್ಲಿ ಹೀಗೆ ಸ್ಯಾಂಡ್‌ವಿಚ್‌ ಆರ್ಡರ್‌ ಮಾಡಿದರೆ, ನಿಮ್ಮ ಖಾದ್ಯ ಇಂದು ರಾತ್ರಿ ಬರೋದಿಲ್ಲ. ಆ ಮೀಲ್ ಹೋದಂತೆಯೇ ಲೆಕ್ಕ. ಆ ಖಾದ್ಯವನ್ನು ಯಾರೂ ತರುವುದಿಲ್ಲ, ಅದನ್ನು ಮರೆತುಬಿಡಿ,” ಎಂದಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, 1.3 ಮಿಲಿಯನ್‌ಗಿಂತಲೂ ಹೆಚ್ಚಿನ ಲೈಕ್ಸ್ ಪಡೆದಿದೆ. ಹೀಗೆಲ್ಲಾ ಆರ್ಡರ್‌ ಮಾಡುವುದಾದರೂ ಹೇಗೆ ಸಾಧ್ಯ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...