alex Certify ಕಚೇರಿಗೆ ಮರಳುವ ಉದ್ಯೋಗಿಗಳಿಗೆ ಈ ಷರತ್ತನ್ನು ವಿಧಿಸಿದೆ ಮೈಕ್ರೋಸಾಫ್ಟ್​ ಕಂಪನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚೇರಿಗೆ ಮರಳುವ ಉದ್ಯೋಗಿಗಳಿಗೆ ಈ ಷರತ್ತನ್ನು ವಿಧಿಸಿದೆ ಮೈಕ್ರೋಸಾಫ್ಟ್​ ಕಂಪನಿ….!

ವರ್ಕ್​ ಫ್ರಮ್​ ಹೋಮ್​ನಿಂದ ಕಚೇರಿಗೆ ಮರಳುವ ವೇಳೆಯಲ್ಲಿ ನೌಕರರಿಗೆ ಯಾವೆಲ್ಲ ಷರತ್ತುಗಳನ್ನು ವಿಧಿಸಬೇಕು ಎಂಬ ವಿಚಾರದಲ್ಲಿ ಐಟಿ ಕಂಪನಿಗಳು ದಿನದಿಂದ ದಿನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಈ ಸಾಲಿಗೆ ಟೆಕ್​ ದೈತ್ಯ ಮೈಕ್ರೋಸಾಫ್ಟ್​ ಕೂಡ ಸೇರಿದೆ.

ತನ್ನ ಇತ್ತೀಚಿನ ಹೇಳಿಕೆಯೊಂದರಲ್ಲಿ ಮೈಕ್ರೋಸಾಫ್ಟ್​ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದೆ. ಈ ಹೇಳಿಕೆಯಲ್ಲಿ ಅಮೆರಿಕದಲ್ಲಿರುವ ತಮ್ಮ ಉದ್ಯೋಗಿಗಳು ಯಾರು ಕಚೇರಿಗೆ ಮರಳುತ್ತಿದ್ದಾರೋ ಅವರೆಲ್ಲರ ಕೈಯಲ್ಲೂ ಕೊರೊನಾ ಲಸಿಕೆ ಪ್ರಮಾಣ ಪತ್ರ ಇರೋದು ಕಡ್ಡಾಯ ಎಂದು ಹೇಳಿದೆ. ಈ ಹೊಸ ನಿಯಮಾವಳಿಯು ಸೆಪ್ಟೆಂಬರ್ ತಿಂಗಳ ಆರಂಭದಿಂದ ಅಸ್ತಿತ್ವಕ್ಕೆ ಬರಲಿದೆ.

ಆನ್ಲೈನ್‌ ಮೂಲಕ ಹಳೆಯ ನೋಟು/ನಾಣ್ಯ ವ್ಯಾಪಾರ ಮಾಡುವವರಿಗೆ ಎಚ್ಚರಿಕೆ ನೀಡಿದ ಆರ್‌ಬಿಐ

ಕೇವಲ ಉದ್ಯೋಗಿಗಳು ಮಾತ್ರವಲ್ಲದೇ ಅಮೆರಿಕದಲ್ಲಿ ಮೈಕ್ರೋಸಾಫ್ಟ್​ ಕ್ಯಾಂಪಸ್​ಗೆ ಭೇಟಿ ನೀಡುವ ಪ್ರತಿ ಅತಿಥಿಯೂ ಲಸಿಕೆ ಸ್ವೀಕರಿಸಿರುವುದು ಕಡ್ಡಾಯವಾಗಿದೆ. ಸೂಕ್ತ ವೈದ್ಯಕೀಯ ಕಾರಣ ಅಥವಾ ಇನ್ಯಾವುದೋ ಸ್ಪಷ್ಟ ಕಾರಣಗಳನ್ನು ಹೊಂದಿರುವವರಿಗೆ ಮಾತ್ರ ಈ ನಿಯಮಾವಳಿಯಿಂದ ವಿನಾಯ್ತಿ ನೀಡಲಾಗುವುದು ಎಂದು ಕಂಪನಿ ಹೇಳಿದೆ.

ಕೊರೊನಾ ಲಸಿಕೆ ಕಡ್ಡಾಯದ ಜೊತೆಗೆ ಮೈಕ್ರೋಸಾಫ್ಟ್​​ ಪೂರ್ಣ ಅವಧಿಗೆ ತನ್ನ ಕಚೇರಿಯನ್ನು ತೆರೆಯುವ ದಿನಾಂಕವನ್ನೂ ಮುಂದೂಡಿದೆ. ಈ ಮೊದಲು ಸೆಪ್ಟೆಂಬರ್​​ 7ಕ್ಕೆ ತೆರೆಯಬೇಕು ಎಂದಿದ್ದ ಕಂಪನಿಯು ಅಕ್ಟೋಬರ್​ 4ರ ಬಳಿಕ ಓಪನ್​ ಆಗಲಿದೆ.

ಪುಟ್ಟ ಮಕ್ಕಳ ಪೋಷಕರಾಗಿರುವ ಉದ್ಯೋಗಿಗಳು ಲಸಿಕೆಯನ್ನು ಪಡೆದುಕೊಳ್ಳಬೇಕು ಹಾಗೂ ಮುಂದಿನ ವರ್ಷ ಜನವರಿವರೆಗೆ ವರ್ಕ್​ ಫ್ರಮ್​ ಹೋಮ್​ ಮೂಲಕವೇ ಕೆಲಸ ನಿರ್ವಹಿಸಬಹುದು. ಇದು ಶಕ್ತಿಗುಂದಿದವರ ಕಾಳಜಿ ವಹಿಸುತ್ತಿರುವ ಉದ್ಯೋಗಿಗೂ ಅನ್ವಯಿಸುತ್ತದೆ ಎಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...